Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಣಿ » ಆಕರ್ಷಣೆಗಳು » ಸೊತ್ತುಪಾರೈ ಆಣೆಕಟ್ಟು

ಸೊತ್ತುಪಾರೈ ಆಣೆಕಟ್ಟು, ತೇಣಿ

1

ಕೊಡೈಕೆನಾಲ್ ಗಿರಿ ಶ್ರೇಣಿಯ ಹಿಂಭಾಗದಲ್ಲಿರುವ ವರಗಾ ನದಿಗೆ ಅಡ್ಡಲಾಗಿ ಸೊತ್ತುಪಾರೈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಪೆರಿಯಾಕುಳಂನಿಂದ 12 ಕಿ.ಮೀ ದೂರದಲ್ಲಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಲು ಇದೊಂದು ಸೂಕ್ತ ಸ್ಥಳ. ಈ ಆಣೆಕಟ್ಟಿಗೆ ಹೋಗುವ ದಾರಿಯ ಇಕ್ಕೆಲಗಳಲ್ಲಿ ಮಾವಿನ ಮರಗಳಿವೆ. ಬೇಸಿಗೆಯಲ್ಲಿ ಈ ದಾರಿಯಲ್ಲಿ ಸಾಗಿದಾಗ ಮಾವಿನ ಕಂಪು ನಿಮ್ಮನ್ನು ಸೆಳೆಯುತ್ತದೆ.

ಪ್ರವಾಸಿಗರು ಆಣೆಕಟ್ಟಿನ ಸಮೀಪ ನಿರ್ಮಿಸಿರುವ ನೆಲಸೇತುವೆಯಿಂದ ಆಣೆಕಟ್ಟನ್ನು ನೋಡಬಹುದು. ಈ ಸೇತುವೆಯ ಸಮೀಪ ಒಂದು ಸುಂದರ ಉದ್ಯಾನವನ ಮತ್ತು ಸುಂದರ ದೀಪಕಂಬಗಳಿವೆ. ಕೊಡೈಕೆನಾಲಿನ ಬೆರಿಜಾಂ ಕೆರೆ ಮತ್ತು ಮಳೆ ನೀರಿನ ಸಣ್ಣ ಝರಿಯಿಂದ ಬರುವ ನೀರನ್ನು ಈ ಆಣೆಕಟ್ಟಿನಲ್ಲಿ ಸಂಗ್ರಹಿಸಲಾಗುತ್ತದೆ. ಈ ಆಣೆಕಟ್ಟು 2.831 ಕ್ಯೂಸೆಕ್ಸ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯಹೊಂದಿದೆ. ಪೆರಿಯಾಕುಳಂ ಮತ್ತು ಅದರ ಹತ್ತಿರದ ಪ್ರದೇಶಗಳಿಗೆ ಕುಡಿಯಲು ಮತ್ತು ವ್ಯವಸಾಯಕ್ಕೆ ಇಲ್ಲಿಂದಲೇ ನೀರು ಸರಬರಾಜು ಮಾಡಲಾಗುತ್ತದೆ. ಇದು ತಮಿಳುನಾಡಿನ ಎರಡನೇ ಅತಿ ದೊಡ್ಡ ಆಣೆಕಟ್ಟು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue