ಕುಂಬಕ್ಕಾರಿ ಜಲಪಾತವು ಕೊಡೈಕೆನಾಲಿನಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತದೆ. ಇದು ಪೆರಿಯಾಕುಳಂನಿಂದ 9 ಕಿಮೀ ದೂರದಲ್ಲಿರುವ ಕುಂಬಕ್ಕಾರಿ ಎಂಬಲ್ಲಿದೆ. ತೇಣಿಯಿಂದ 24 ಕಿಮೀ ದೂರದಲ್ಲಿದೆ. ನಿಸರ್ಗದ ನಡುವಿನ ಈ ಜಲಪಾತವು ಹಕ್ಕಿಗಳ ಚಿಲಿಪಿಲಿಯೊಂದಿಗೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಈ ಜಲಪಾತವು ಎರಡು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಮೊದಲ ಹಂತದಲ್ಲಿ 400 ಅಡಿಗಳಿಂದ ಧುಮ್ಮಿಕುವ ಜಲಪಾತವು ದೊಡ್ಡ ಕಲ್ಲಿನ ಗೂಡುಗಳಲ್ಲಿ ಶೇಖರಣೆಯಾಗುತ್ತದೆ. ಇದಕ್ಕೆ ಕಾಡುಪ್ರಾಣಿಗಳ ಹೆಸರುಗಳನ್ನು ಇಡಲಾಗಿದೆ.
ಜಲಪಾತವು ಬೀಳುವಲ್ಲಿ ಮುರುಗನ ವಿಗ್ರಹವೊಂದಿದೆ. ಪ್ರವಾಸಿಗರು ಇಲ್ಲಿನ ನೀರಿನಲ್ಲಿ ಮುಳುಗೇಳಲು ಬಹಳ ಇಷ್ಟಪಡುತ್ತಾರೆ. ಜಲಪಾತದ ಬಳಿ ಹೋಗುವ ಹಾದಿಯಲ್ಲಿ ಜಾರು ಬಂಡೆಗಳಿರುವುದರಿಂದ ಸ್ಥಳೀಯರ ನೆರವಿನಿಂದ ಅಲ್ಲಿಗೆ ಹೋಗುವುದು ಉತ್ತಮ. ಈ ಜಲಪಾತಕ್ಕೆ ವರ್ಷದ ಯಾವ ಸಮಯದಲ್ಲಾದರೂ ಭೇಟಿ ನೀಡಬಹುದು. ಆದರೆ ಮಳೆಗಾಲದಲ್ಲಿ ಇದು ಮೈದುಂಬಿ ಧುಮ್ಮಿಕ್ಕುತ್ತದೆ.


Click it and Unblock the Notifications