Search
  • Follow NativePlanet
Share
ಮುಖಪುಟ » ಸ್ಥಳಗಳು » ತವಾಂಗ್ » ಆಕರ್ಷಣೆಗಳು » ತವಾಂಗ್ ಆಶ್ರಮ

ತವಾಂಗ್ ಆಶ್ರಮ, ತವಾಂಗ್

3

ತವಾಂಗ್ ಆಶ್ರಮವು ಭಾರತ ಮತ್ತು ಏಷ್ಯಾದ ಎರಡನೇ ಅತಿದೊಡ್ಡ ಆಶ್ರಮ. ಕ್ರಿ.ಶ.1680  - 1681 ರಲ್ಲಿ ಮೆರಾಕ್ ಲಾಮಾ ಲೊದ್ರೆ ಇದನ್ನು ಸ್ಥಾಪಿಸಿದರು. ಇದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಬೊಂದಿಲ ರಿಂದ 180 ಕಿಮೀ ದೂರದಲ್ಲಿದೆ .

ಈ ಮಠವನ್ನು ಗಲ್ದೆನ್  ನಮ್ಗಾಯಲ್  ಲ್ಹತ್ಸೆ ಎಂದೂ  ಸಹ ಕರೆಯಲಾಗುತ್ತದೆ.  ಇದು ಸಮುದ್ರ ಮಟ್ಟಕ್ಕಿಂತ 10,000 ಅಡಿ ಎತ್ತರದ ಬೆಟ್ಟದ ಮೇಲೆ ನಿರ್ಮಿತವಾಗಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳು ಭಗವಾನ್ ಬುದ್ಧನ 28 ಅಡಿ ಎತ್ತರದ ಚಿನ್ನದ ಪ್ರತಿಮೆ ಮತ್ತು ಭವ್ಯ ಮೂರು ಅಂತಸ್ತಿನ ಅಸೆಂಬ್ಲಿ ಹಾಲ್,  ಪ್ರಾಚೀನ ಪುಸ್ತಕಗಳು ಮತ್ತು ಹಸ್ತಪ್ರತಿಗಳ ಪ್ರಭಾವಶಾಲಿ ಸಂಗ್ರಹದೊಂದಿಗೆ ದೊಡ್ಡ ಗ್ರಂಥಾಲಯ.  ಈ ಹಸ್ತಪ್ರತಿಗಳು 17 ನೇ ಶತಮಾನದವು ಎಂದು ನಂಬಲಾಗುತ್ತದೆ .

ಮೆರಗ್ ಲಾಮಾ ಲೊದ್ರೆ ಗ್ಯಾಂತ್ಸೊಅವರು ತಮ್ಮ ಧಾರ್ಮಿಕ ಚಟುವಟಿಕೆಗಳಿಗಾಗಿ ಆಶ್ರಮ ಒಂದನ್ನು ಸ್ಥಾಪಿಸಬೇಕೆಂದು ತೀರ್ಮಾನಿಸಿದರು. ಅದಕ್ಕಾಗಿ ಸ್ಥಳಾನ್ವೇಷಣೆಯನ್ನು ಪ್ರಾರಂಭಿಸಿದರು. ಆದರೆ ಯಾವ ಸ್ಥಳವೂ ಅವರಿಗೆ ಆಶ್ರಮ ಯೋಗ್ಯವಾಗಿ ಕಾಣಲಿಲ್ಲ. ದಾರಿಕಾಣದ ಅವರು, ತಮಗೆ ಮಾರ್ಗದರ್ಶನ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿ ಕಣ್ತೆರೆದು ನೋಡಿದರೆ ಅವರ ಕುದುರೆ ಕಾಣೆಯಾಗಿ ಬಿಟ್ಟಿತ್ತು !

ಈಗಾಗಲೇ ಅವರಿಗೆ ಆಯಾಸವಾಗಿತ್ತು. ಆದರೂ ಅವರು ತಮ್ಮ ಕುದರೆಯನ್ನು ಹುಡುಕಿಕೊಂಡು ಹೋದರು. ಅದು ಒಂದು ಬೆಟ್ಟದ ಮೇಲೆ ನಿಂತಿದ್ದನ್ನು ಕಂಡ ಲಾಮಾ ಇದನ್ನು ಶುಭ ಶಕುನವೆಂದು ಬಗೆದರು. ಈ ಸ್ಥಳಕ್ಕೆ ತವಾಂಗ್ ಎಂದು ಹೆಸರಿಟ್ಟರು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun