ತವಾಂಗ್, ವರ್ಷದ ಹೆಚ್ಚಿನ ಕಾಲ ಮಧ್ಯಮ ಹವಾಗುಣವನ್ನು ಅನುಭವಿಸುತ್ತದೆ . ಮಾರ್ಚ್ ದಿಂದ ಅಕ್ಟೋಬರ್ ವರೆಗಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿಗಳು ಹಿತಕರವಾಗಿರುತ್ತವೆ.ಆದ್ದರಿಂದ ಈ ಕಾಲವನ್ನು ತವಾಂಗ್ ಭೇಟಿಗೆ ಅತ್ಯುತ್ತಮ ಸಮಯ ಎಂದು ಪರಿಗಣಿಸಬಹುದು.
ಮಾರ್ಚ್- ಜೂನ್ ವರೆಗಿನ ಬೇಸಿಗೆಯು ಸೌಮ್ಯವಾಗಿದ್ದು, ಈ ಸಮಯದಲ್ಲಿ ಗರಿಷ್ಠ ತಾಪಮಾನವು 22 ಡಿಗ್ರಿ ಆಗಿರುತ್ತದೆ . ವರ್ಷದ ಅತ್ಯಂತ ಬಿಸಿ ತಿಂಗಳು ಸಾಮಾನ್ಯವಾಗಿ ಜೂನ್ ಆಗಿರುತ್ತದೆ.
ಜುಲೈನಿಂದ ಸೆಪ್ಟೆಂಬರ್ ವರೆಗಿನ ಮಳೆಗಾಲವು ಅತಿ ಹೆಚ್ಚು ಮಳೆ ಸುರಿಸುತ್ತದೆ ಮತ್ತು ಹವಾಮಾನ ತೇವಾಂಶದಿಂದ ಕೂಡಿರುತ್ತದೆ.
ಚಳಿಗಾಲದ ನವೆಂಬರ್ ನಿಂದ ಫೆಬ್ರುವರಿ. ಈ ತಿಂಗಳಲ್ಲಿ ತವಾಂಗ್ ಕಠಿಣ ಹವಾಮಾನ ಎದುರಿಸುತ್ತದೆ . ತಾಪಮಾನವು ಘನೀಕರಣ ಬಿಂದುವಿಗಿಂತಲೂ ಕಡಿಮೆಯಾಗಬಹುದು. ಈ ಸಮಯದಲ್ಲಿ ಕನಿಷ್ಠ ತಾಪಮಾನ -13 ಡಿಗ್ರಿ ಸೆಲ್ಷಿಯಸ್ ಮತ್ತು ಗರಿಷ್ಠ ಸುಮಾರು 10 ಡಿಗ್ರಿ ಸೆಲ್ಷಿಯಸ್. ಜನವರಿ ವರ್ಷದ ಅತ್ಯಂತ ತಂಪಾದ ತಿಂಗಳು.