ಇದು ಭೂಮಿಯ ಮೇಲಿನ ಸ್ವರ್ಗ ಎಂದರೆ ತಪ್ಪಾಗಲಾರದು. ಚಳಿಗಾಲದಲ್ಲಿ, ಸೇಲಾ ಶ್ರೇಣಿಯು ಬಿಳಿ ಮಂಜಿನ ನಿಲುವಂಗಿ ತೊಟ್ಟು ಅದ್ದೂರಿಯಾಗಿ ಸಿಂಗರಿಸಿಕೊಂಡಿರುತ್ತದೆ. ವರ್ಷದ ಹೆಚ್ಚಿನ ಕಾಲ ಹಿಮಾವೃತ್ತವಾಗಿರುವ ಈ ಸ್ಥಳದಲ್ಲಿ ಅತ್ಯುತ್ತಮ ವೀಕ್ಷಣೆಗಳು ವರ್ಷಪೂರ್ತಿ ಒದಗುತ್ತದೆ.
ಪೂರ್ವ ಹಿಮಾಲಯದ ಶ್ರೇಣಿಯ ಈ ಭಾಗವು ಬೌದ್ಧರಿಗೆ ಸಾಕಷ್ಟು ವಿಶೇಷವಾದದ್ದು. ಸೇಲಾ ಪಾಸ್ ನಲ್ಲಿ ಸುಮಾರು 101 ಬಗೆಯ ಸರೋವರಗಳು ಅಸ್ತಿತ್ವದಲ್ಲಿವೆ ಎಂದು ನಂಬಲಾಗಿದೆ. ಸೇಲಾ ಪಾಸ್ ಚಳಿಗಾಲದಲ್ಲಿ ಭಾರಿ ಹಿಮಪಾತವಾಗುವದರಿಂದ ಭೂಕುಸಿತಗಳ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ತಾತ್ಕಾಲಿಕವಾಗಿ ಇಲ್ಲಿನ ರಸ್ತೆಯನ್ನು ಮುಚ್ಚಲಾಗುತ್ತದೆ. ಇದನ್ನು ಹೊರತು ಪಡಿಸಿದರೆ ಅದು ಸಾಮಾನ್ಯವಾಗಿ ವರ್ಷವೆಲ್ಲ ತೆರೆದಿರುತ್ತದೆ.


Click it and Unblock the Notifications