ಪಡಿ ಇಗ್ಗುತ್ತಪ್ಪ ದೇಗುಲವು ಇಗ್ಗುತ್ತಪ್ಪ ದೇವರಿಗೆ ಅರ್ಪಿತವಾಗಿದ್ದು, ಕೊಡಗಿನ ಕಕ್ಕಬ್ಬೆಯ ಬುಡಕಟ್ಟಿನ ಕೊಡವರ ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿದೆ. ಇಲ್ಲಿರುವ ದಂತಕಥೆಯ ಪ್ರಕಾರ, ಈ ಪಡಿ ಇಗ್ಗುತ್ತಪ್ಪ ದೇಗುಲವನ್ನು ಲಿಂಗರಾಜೇಂದ್ರ ರಾಜರು 1810ರಲ್ಲಿ ಕಟ್ಟಿಸಿದ್ದು, ಈತನ ಆಳ್ವಿಕೆಯಲ್ಲಿ ಈ ದೇಗುಲ ಹೆಚ್ಚು ಪ್ರಸಿದ್ಧಿಗೆ ಬಂತು ಎನ್ನಲಾಗಿದೆ. ಪಡಿ ಇಗ್ಗುತ್ತಪ್ಪ ದೇವರು ಜನಪ್ರಿಯ ದೈವವಾದ ಸುಬ್ರಹ್ಮಣ್ಯನ ಅವತಾರ ಎಂಬ ನಂಬಿಕೆಯಿದ್ದು, ಇಗ್ಗುತ್ತಪ್ಪ, ಆರಾಧಕರು ಅಪಾರವಾಗಿ ನಂಬುವ ದೈವವಾಗಿದೆ.ಮಳೆದೇವರೆಂದೂ ಕರೆಯಲ್ಪಡುವ ಇಗ್ಗುತ್ತಪ್ಪನಿಗೆ ಇಲ್ಲಿನ ರೈತಾಪಿಗಳು ಮಳೆಗಾಗಿ ಪ್ರಾರ್ಥಸಿ ಕಾಣಿಕೆಗಳನ್ನು ಅರ್ಪಿಸುತ್ತಾರೆ. "ತುಲಾಭಾರ ", ಒಂದು ವಿಶೇಷ ಕಾಣಿಕೆಯಾಗಿದ್ದು, ಭಕ್ತಾದಿಗಳು ತಮ್ಮ ತೂಕಕ್ಕೆ ಸಮನಾದ ತೆಂಗಿನಕಾಯಿ,ಹಣ್ಣು, ಅಕ್ಕಿ ಮುಂತಾದ ಸಾಮಗ್ರಿಗಳನ್ನು ಅರ್ಪಿಸುತ್ತಾರೆ.ಈ ದೇಗುಲವು ಇಲ್ಲಿನ ಜನರ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಜೀವನ ಶೈಲಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ " ಕಾಳಿಯಾರ್ಚಿ " ಹಬ್ಬ ಆಚರಿಸಲ್ಪಡುತ್ತದೆ. ಪಡಿ ಇಗ್ಗುತ್ತಪ್ಪ ದೇವರ ಮೂರ್ತಿಯ ಮೆರವಣಿಗೆಯು ದೇಗುಲದಿಂದ ಹೊರಟು ಮಲ್ಲಮ್ಮ ಬೆಟ್ಟಕ್ಕೆ ತಲುಪಿ ಹಿಂತಿರುಗುತ್ತದೆ. ಅನಂತರ ಅನೇಕ ಸಾಂಪ್ರದಾಯಿಕ ನೃತ್ಯಗಳ ಕಾರ್ಯಕ್ರಮವಿರುತ್ತದೆ.ತಡಿಯಾಂಡಮೋಲ್‍ಗೆ ಭೇಟಿ ನೀಡುವ ಪ್ರವಾಸಿಗರು ಸುಂದರವಾದ ಪಡಿ ಇಗ್ಗುತ್ತಪ್ಪ ದೇಗುಲವನ್ನು ತಪ್ಪದೇ ನೋಡಿರಿ.


Click it and Unblock the Notifications