ದಾಲ್ ಸರೋವರದ ಪಶ್ಚಿಮದಲ್ಲಿರುವ ಹರಿ ಪರ್ಬತ್ ಕೋಟೆಯನ್ನು ಅಪ್ಘನ್ ಗವರ್ನರ್ ಅಟ್ಟಾ ಮಹಮ್ಮದ ಖಾನ್ 18 ನೇಯ ಶತಮಾನದಲ್ಲಿ ಕಟ್ಟಿಸಿದನು. ಇದಕ್ಕೂ ಮೊದಲು ಇದರ ಸುತ್ತಲಿನ ಗೋಡೆಗಳನ್ನು ಮಾತ್ರ ಮೊಘಲ್ ಸುಲ್ತಾನ ಅಕ್ಬರ್ 1590 ರಲ್ಲಿ ಕಟ್ಟಿಸಿದ್ದನು. ಇಲ್ಲಿನ ಸ್ಥಳೀಯರು ನಂಬುವ ಕಥೆಯ ಪ್ರಕಾರ ಹರಿ ಪರ್ಬತ್ ಹಿಂದೆ ಒಂದು ದೊಡ್ಡ ಸರೋವರವಾಗಿತ್ತು ಹಾಗು ಇಲ್ಲಿ ಜಲೋಭವ ಎಂಬ ಹೆಸರಿನ ರಾಕ್ಷಸ ವಾಸಿಸುತ್ತಿದ್ದನು. ಇದರಿಂದ ಭಯಭೀತರಾದ ಸ್ಥಳೀಯರು ಹಿಂದೂ ದೇವತೆ ಸತಿಯ ಬಳಿ ರಕ್ಷಣೆಯ ಮೊರೆಯಿಟ್ಟರು. ಆಗ ಆಕೆ ಒಂದು ಹಕ್ಕಿಯ ವೇಷ ತಾಳಿ ಒಂದು ಕಲ್ಲನ್ನು ಆ ರಾಕ್ಷಸನ ತಲೆಯ ಮೇಲೆ ಹೊತ್ತು ಹಾಕಿದಳು. ಈ ಕಲ್ಲು ಕ್ರಮೇಣ ಬೆಳೆಯಲಾರಂಭಿಸಿ ನೆಲದ ಕಡೆ ಬೆಳೆಯತೊಡಗಿತು ಹಾಗೂ ಆ ರಾಕ್ಷಸನನ್ನು ಕೊಂದುಹಾಕಿತು.
ಈ ಕೋಟೆಯನ್ನು ಈಗ ಕಾಶ್ಮೀರದ ಪುರಾತತ್ವ ಇಲಾಖೆ ನೋಡಿಕೊಳ್ಳುತ್ತದೆ. ಈ ಕೋಟೆಯನ್ನು ನೋಡಲಿಚ್ಛಿಸುವ ಪ್ರವಾಸಿಗರು ಇಲಾಖೆಯಿಂದ ಮುಂಚಿತವಾಗಿ ಅನುಮತಿಯನ್ನು ಪಡೆದು ಹೋಗಬೇಕಾಗಿದೆ. ಲಾಲ್ ಮಂಡಿ ಚೌಕ ಮತ್ತು ಶಕಿರಾ ದೇವಿ ದೇವಾಲಯ ಹರಿ ಪರ್ಬತ್ ಕೋಟೆಯ ಬಳಿಯಿರುವ ಕೆಲವು ಪ್ರಮುಖವಾದ ಸ್ಥಳಗಳಾಗಿವೆ.


Click it and Unblock the Notifications