Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ದಾಲ್ ಸರೊವರ

ದಾಲ್ ಸರೊವರ, ಶ್ರೀನಗರ

15

‘ಕಾಶ್ಮೀರದ ಮುಕುಟದ ರತ್ನ’ ಅಥವಾ ’ಶ್ರೀನಗರದ ರತ್ನ’ ಎಂದೇ ಖ್ಯಾತವಾಗಿರುವ ದಾಲ್ ಸರೋವರ ಕಾಶ್ಮೀರದ ಎರಡನೆಯ ದೊಡ್ಡ ಸರೋವರ. ಇದು 26 ಚದರ ಕಿಲೋಮೀಟರ್ ಗಳಷ್ಟು ವಿಸ್ತಾರವಾಗಿ ಹರಡಿದೆ. ಇದರ ಹಿಂದೆ ಕಾಣುವ ಹಿಮಾಲಯದ ದೃಶ್ಯವು ಅತ್ಯ್ಂತ ನಯನ ಮನೋಹರವಾಗಿದೆ. ಇಲ್ಲಿ ದೋಣಿಮನೆಗಳು ಮತ್ತು 'ಶಿಖಾರಾ' ವೆಂಬ ಮರದ ಬೋಟ್ ಗಳು ಬಹಳ ಪ್ರಸಿದ್ಧವಾಗಿವೆ. ದೋಣಿಮನೆಗಳು ದಾಲ್ ಸರೋವರದ ಸುತ್ತಲೂ ನಿಮ್ಮನ್ನು ಒಯ್ದರೆ ಶಿಖಾರಾಗಳು ದೋಣಿ ಮನೆಗಳಿಂದ ದಾಲ್ ಸರೋವರಕ್ಕೆ ನಿಮ್ಮನ್ನು ಕೊಂಡೊಯ್ಯುತ್ತದೆ.

ದಾಲ್ ಸರೋವರವು, ಇಲ್ಲಿರುವ ಸೇತುವೆಯ ಮೂಲಕ ಲೋಕುತ್ ದಾಲ್, ಗಾಗ್ರಿಬಾಲ್, ಬೊಡ್ ದಾಲ್ ಮತ್ತು ನಾಗಿನ್ ಎಂಬ ನಾಲ್ಕು ವಿಭಾಗಗಳಾಗಿ ವಿಂಗಡನೆಯಾಗಿದೆ. ಇಲ್ಲಿನ ರಮ್ಯವಾದ ನಿಸರ್ಗ ಸೌಂದರ್ಯ ಮತ್ತು ಪ್ರಶಾಂತವಾದ ವಾತಾವರಣ ಇದನ್ನು ಒಂದು ಪ್ರಮುಖ ಪ್ರವಾಸಿ ತಾಣವನ್ನಾಗಿಸಿದೆ. ಇಲ್ಲಿ ದೋಣಿಮನೆಗಳು ಮತ್ತಿ ಶಿಖಾರಾಗಳ ಮೇಲೆ ಕುಳಿತು ನೋಡಬಹುದಾದ ಸೂರ್ಯಾಸ್ತದ ದೃಶ್ಯವು ಬಹಳ ಸುಂದರವಾಗಿರುತ್ತದೆ. ಇಲ್ಲಿ ಪ್ರವಾಸಿಗರು ಹಲವು ನೀರಿನ ಆಟಗಳನ್ನೂ ಕೂಡ ಆಡಬಹುದಾಗಿದೆ. ಈಜುವಿಕೆ, ವಾಟರ್ ಸರ್ಫಿಂಗ್, ಕೈಕೇಯಿಂಗ್, ಆಂಗ್ಲಿಂಗ್ ಮತ್ತು ಕಾನನಿಂಗ್ ಇಲ್ಲಿನ ಕೆಲವು ಪ್ರಮುಖ ನೀರಿನ ಆಟಗಳಾಗಿವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri