ಸೋಲಾಪುರ ಜಿಲ್ಲೆಗೆ ಅತ್ಯಂತ ಸಮೀಪದಲ್ಲಿರುವ ಪುಟ್ಟ ಹಳ್ಳಿ ವೇಲಾಪುರ. ಪಂಢರಾಪುರದಿಂದ 32 ಕಿ.ಮೀ. ದೂರದಲ್ಲಿದೆ. ಅತ್ಯಂತ ಜನಪ್ರಿಯ ತಾಣ ಇದಾಗಿದ್ದು, ಐತಿಹಾಸಿಕ ಪ್ರಸಿದ್ಧ ದೇವಾಲಯವನ್ನು ಒಳಗೊಂಡಿದೆ. ಇದು ಅತ್ಯಂತ ಪ್ರಸಿದ್ಧ ಹೇಮಂಡಪತ್ತಿ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದೆ. ಅತ್ಯಂತ ಸುಂದರವಾದ ದೇವಾಲಯ ಇದು. ದೇವಾಲಯವು 20 ಕಲ್ಲಿನ ವಿಗ್ರಹಗಳನ್ನು ಆವರಣದ ಸುತ್ತ ಒಳಗೊಂಡಿದೆ. ಹರನರೇಶ್ವರ ದೇವಾಲಯ ಇಲ್ಲಿನ ಇನ್ನೊಂದು ಆಕರ್ಷಣೆ. ಇವೆರಡೂ ದೇವಾಲಯಗಳು ಹತ್ತಿರದಲ್ಲೆ ಇರುವುದರಿಂದ ಸಾಕಷ್ಟು ಭಕ್ತರನ್ನು ಸೆಳೆಯುತ್ತವೆ. ಇಲ್ಲಿನ ದೇವಾಲಯದ ಕುರಿತು ಸಾಕಷ್ಟು ಬರಹಗಳು ಇದ್ದು, ಓದಲು ಲಭ್ಯವಿದೆ. ದೇವಾಲಯದ ಹೊರಗೆ ಚೌಕಾಕಾರದ ನೀರಿನ ಕೊಳ ಕೂಡ ಇದೆ.
ಅಲ್ಲದೆ ಈ ಹಳ್ಳಿಯು ಹಳೆಯ ವಿನ್ಯಾಸದ ಮನೆಗಳು, ಕಟ್ಟಡದಿಂದ ಜನಪ್ರಿಯವಾಗಿದ್ದು, ಸನಾತನ ಸಂಸ್ಕೃತಿಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿ ನಿಂತಿದೆ. ಅನೇಕ ಕುಟುಂಬದವರು ಇಲ್ಲಿ ನೂರಾರು ವರ್ಷದಿಂದ ನೆಲೆಸಿದ್ದಾರೆ. ಈ ಮೂಲಕ ಭಾರತೀಯ ಜೀವನ ಶೈಲಿಯನ್ನು ಉನ್ನತ ಸ್ಥಾನಕ್ಕೆ ಏರಿಸಿದ್ದಾರೆ. ಸೋಲಾಪುರ ನಗರದಿಂದ ಇಲ್ಲಿಗೆ ತಲುಪುವುದು ಅತ್ಯಂತ ಸುಲಭ. ಸ್ಥಳೀಯ ನಗರ ಸಾರಿಗೆ ಬಸ್‌ಗಳು ಹಾಗೂ ಖಾಸಗಿ ವಾಹನ ಪಡೆದು ಬರಬಹುದು. ಸೋಲಾಪುರ ರೈಲು ನಿಲ್ದಾಣದಲ್ಲಿ ಇಳಿದು ಕೂಡ ವಾಹನ ಪಡೆದು ಬರಬಹುದಾಗಿದೆ.


Click it and Unblock the Notifications