Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಶ್ರೀ ದಹಿಗಾಂವ್ ತೀರ್ಥ

ಶ್ರೀ ದಹಿಗಾಂವ್ ತೀರ್ಥ, ಸೋಲಾಪುರ

1

ಶ್ರೀ ದಹಿಗಾಂವ್ ತೀರ್ಥವು ತುಳಜಾಪುರ ಹಳ್ಳಿಯಲ್ಲಿದೆ. ಇದು ಜನಪ್ರಿಯ ಜೈನ ಮಂದಿರವಾಗಿದೆ. ಈ ದೇವಾಲಯ ಇರುವ ಹಳ್ಳಿ ಕೂಡ ಶ್ರೀ ದಹಿಗಾಂವ್ ತೀರ್ಥ ಅಂತಲೇ ಗುರುತಾಗಿದೆ. ಇದು ಸೋಲಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ.

ಈ ಧಾರ್ಮಿಕ ಕೇಂದ್ರದಲ್ಲಿ ಭಗವಾನ್‌ ಮಹಾವೀರರ 244 ಸೆ.ಮೀ. ಎತ್ತರವಾದ ಕಪ್ಪು ವರ್ಣದ ಶಿಲ್ಪವಿದೆ. ಭಗವಾನ್‌ ಮಹಾವೀರರು ಪದ್ಮಾಸನ ಹಾಕಿ ಕುಳಿತ ರೀತಿಯಲ್ಲಿ ಶಿಲ್ಪ ಕೆತ್ತಲಾಗಿದೆ. 1889 ರಲ್ಲಿ ಇದ್ದ ವಿಕ್ರಮ ಯುಗದ ಮಹಾತ್ತಿಸಾಗರ್‌ಜೀ ಮಹಾರಾಜ್‌ ಸಾಹೇಬ್‌ ಎಂಬುವವರ ಪವಿತ್ರ ಪಾದ ಛಾಯೆಯನ್ನು ಇಲ್ಲಿ ಕಾಣಬಹುದು.

ದೇವಾಲಯದ ಗೋಡೆಗಳು ಅತ್ಯಂತ ವಿಶಿಷ್ಟವಾಗಿ ಅಲಂಕೃತವಾಗಿವೆ. ಅತ್ಯಾಕರ್ಷವಾಗಿ ಇವನ್ನು ಸಿದ್ಧಪಡಿಸಲಾಗಿದೆ. ಅಪರೂಪದ ಪೇಂಟಿಂಗ್‌ಗಳು ಇಲ್ಲಿವೆ. ಅತ್ಯಂತ ಪುರಾತನ ಗೋಡೆಯನ್ನು ಇವು ಅಲಂಕರಿಸಿವೆ. ಈ ಚಿತ್ರಗಳನ್ನು ದಿಗಂಬರ ಆಚಾರ್ಯರು ಬಿಡಿಸಿದ್ದಾರೆ ಎನ್ನಲಾಗುತ್ತದೆ.

ಈ ತೀರ್ಥಕ್ಷೇತ್ರಕ್ಕೆ ಒಂದು ಹಿನ್ನಲೆ ಇದೆ. ಜನರಿಗಾಗಿ ಮಹಾತ್ತಿಸಾಗರ್‌ಜೀ ಮಹಾರಾಜ್‌ ಸಾಹೇಬ್‌ ಧ್ಯಾನ ಮಾಡಿದ್ದರು ಎಂದು ಹೇಳಲಾಗುತ್ತದೆ. ಈ ಕೇಂದ್ರವು ಅತ್ಯಂತ ಸುಗಮವಾಗಿ ತಲುಪಬಲ್ಲ ಅನುಕೂಲತೆಗಳನ್ನು ಹೊಂದಿದೆ. ಸೋಲಾಪುರದ ಬಸ್‌ ಹಾಗೂ ರೈಲು ನಿಲ್ದಾಣಗಳಿಂದ ಇಲ್ಲಿಗೆ ತೆರಳಲು ವಾಹನ ಸೌಲಭ್ಯ ಉತ್ತಮವಾಗಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue