ನನ್ನಜ್ ದೇಶದ ಅತ್ಯಂತ ಜನಪ್ರಿಯ ಪಕ್ಷಿ ಧಾಮಗಳಲ್ಲಿ ಒಂದೆನಿಸಿದೆ. ಇದರ ಜನಪ್ರಿಯತೆಯನ್ನು ಬಿ.ಎಸ್. ಕುಲಕರ್ಣಿ ಎಂಬುವರು 1971ರಲ್ಲಿ ಹೆಚ್ಚಿಸಿದರು. ಸೋಲಾಪುರ ಜಿಲ್ಲೆಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಇದು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಅತ್ಯಾಕರ್ಷಕ ಧಾಮ ಎಂಬ ಹೆಸರನ್ನು ಹೊಂದಿರುವ ಈ ತಾಣ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿಯೂ ಜನಪ್ರಿಯವಾಗಿದೆ.
ಈ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಧಾಮವನ್ನು ಸ್ಥಳೀಯರು ಮಾಲ್ಡೋಕ್ ಎಂದು ಕರೆಯುತ್ತಾರೆ. ಇದೊಂದು ಅಪರೂಪದ ಪಕ್ಷಿ ಸಂತತಿಯಾಗಿದೆ. ಅತ್ಯಂತ ದೊಡ್ಡ ಜಾತಿಯ ಹಕ್ಕಿ. ಬಿಳಿ ಹಾಗೂ ಕಂದು ಬಣ್ಣದಲ್ಲಿ ಇರುತ್ತದೆ. ಇವು ಹುಲ್ಲುಗಾವಲು ಹಾಗೂ ಅರೆ ಹುಲ್ಲುಗಾವಲು ಪ್ರದೇಶದಲ್ಲಿ ವಾಸಿಸುವ ಜಾತಿಯ ಪಕ್ಷಿಗಳು. ಈ ಪಕ್ಷಿಯು ಸುಮಾರು 122 ಸೆ.ಮೀ. ಉದ್ದ ಇರುತ್ತವೆ. ಹೆಣ್ಣು ಹಕ್ಕಿ ಕೊಂಚ ಚಿಕ್ಕದಾಗಿರುತ್ತದೆ. ಇದರ ಉದ್ದ 92 ಸೆ.ಮೀ.ವರೆಗೂ ಇರುತ್ತದೆ.
ಈ ಪಕ್ಷಿಧಾಮವು ಸುಮಾರು 8,500 ಚದರ್ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿದೆ. ಇದೆ ಧಾಮದಲ್ಲಿ 14ನೇ ಶತಮಾನದಲ್ಲಿ ಮುಸ್ಲಿಮರು ನಿರ್ಮಿಸಿದ್ದ ಕೋಟೆಯೊಂದಿದೆ.
ಈ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಮಾತ್ರವಲ್ಲದೆ, ಇಲ್ಲಿ ಸಾಮಾನ್ಯವಾಗಿ ಮಂಗೂಸ್‌ಗಳು, ಭಾರತೀಯ ತೋಳ, ಕೃಷ್ಣಮೃಗ, ಹೈನಾ, ನರಿ ಸೇರಿದಂತೆ ಹಲವು ಪ್ರಾಣಿಗಳು ಕೂಡ ಕಾಣಸಿಗುತ್ತವೆ.


Click it and Unblock the Notifications