Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು » ಭಗವಂತ ದೇವಾಲಯ

ಭಗವಂತ ದೇವಾಲಯ, ಸೋಲಾಪುರ

1

ಸೋಲಾಪುರ ಜಿಲ್ಲೆಯ ವ್ಯಾಪ್ತಿಯಲ್ಲೆ ಭಗವಂತ ದೇವಾಲಯ ಬರುತ್ತದೆ. ಇದು ಬಾರ್ಶಿಯ ಕೇಂದ್ರಸ್ಥಳವೂ ಆಗಿದೆ. ಇದು ವಿಷ್ಣುವಿಗೆ ಮೀಸಲಾದ ದೇವಾಲಯವಾಗಿದೆ. ಇಲ್ಲಿ ವಿಷ್ಣು ದೇವರು 'ಭಗವಂತ' ಅನ್ನುವ ಹೆಸರಿನಲ್ಲಿ ಪೂಜೆಗೊಳಗಾಗುತ್ತಿದ್ದಾನೆ.   ಈ ದೇವಾಲಯ ಅತ್ಯಂತ ಪುರಾತನವಾಗಿದ್ದು, 1245 ರಲ್ಲಿ ಅಂದರೆ ಸುಮಾರು 800 ವರ್ಷದ ಹಿಂದೆ ನಿರ್ಮಿಸಿದ್ದು ಎಂದು ಅಂದಾಜಿಸಲಾಗಿದೆ. ಅತ್ಯಂತ ಜನಪ್ರಿಯ ವಾಸ್ತುಶಿಲ್ಪ ಪ್ರಕಾರವಾದ ಹೇಮಾಂದಪತಿ ಶೈಲಿಯನ್ನು ಈ ದೇವಾಲಯ ಒಳಗೊಂಡಿದೆ.

ಇಲ್ಲಿನ ಬಹುತೇಕ ದೇವಾಲಯಗಳು ಇದೆ ವಾಸ್ತುಶಿಲ್ಪ ಮಾದರಿಯನ್ನು ಒಳಗೊಂಡಿವೆ ಎನ್ನುವುದು ಇನ್ನೊಂದು ವಿಶೇಷ.   ಈ ದೇಗುಲದ ಇನ್ನೊಂದು ವಿಶೇಷವೆಂದರೆ ನಾಲ್ಕು ಪ್ರತ್ಯೇಕ ಪ್ರವೇಶದ್ವಾರ ಇರುವುದು. ಇವೂ ನಾಲ್ಕು ದಿಕ್ಕಿಗೆ ಒಂದರಂತೆ ಇವೆ. ಮುಖ್ಯದ್ವಾರವು ಪೂರ್ವ ದಿಕ್ಕಿಗಿದೆ.   ವಿಷ್ಣುವಿನ ವಿಗ್ರಹವು ಕಪ್ಪು ಕಲ್ಲಿನಿಂದ ಸಿದ್ಧಪಡಿಸಲಾಗಿದೆ. ಈ ಮೂರ್ತಿಯು ಚಕ್ರ, ಗದೆ, ಶಂಖವನ್ನು ಕೈಯಲ್ಲಿ ಹಿಡಿದಿರುವುದನ್ನು ನೋಡಬಹುದು. ಇದೆ ದೇವಾಲಯದಲ್ಲಿ ವಿಷ್ಣುವಿನ ಪತ್ನಿ ಲಕ್ಷ್ಮಿ ಹಾಗೂ ಶಿವಲಿಂಗವು ಕೂಡ ಕಂಡುಬರುತ್ತದೆ. ಭೃಗು ಮಹರ್ಷಿಯ ಪಾದದ ಅಚ್ಚನ್ನು ಇಲ್ಲಿ ಜೋಪಾನ ಮಾಡಿಡಲಾಗಿದೆ. 

ಧೂಪದ ಆರತಿ, ಕಾಕಡಾ ಆರತಿ, ಮಹಾಪೂಜಾ ಧೂಪದ ಆರತಿ ಇಲ್ಲಿನ ಪ್ರಮುಖ ನಿತ್ಯ ಪೂಜಾ ವಿಧಾನಗಳು. ಆಷಾಢಿ ಹಾಗೂ ಕಾರ್ತೀಕ ಏಕಾದಶಿ ಇಲ್ಲಿನ ಪ್ರಮುಖ ಉತ್ಸವಗಳು. ಸಾಕಷ್ಟು ವಿಜೃಂಭಣೆಯಿಂದ ಇವನ್ನು ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat