ಪೂರ್ವದ ಗ್ಲೆನ್‍ಇಗಲ್ (Gleneagle) ಎಂದೇ ಗುರುತಿಸಲಾಗುವ ಶಿಲ್ಲಾಂಗ್ ನ ಗಾಲ್ಫ್ ಆಟದ ಮೈದಾನ. ಶಿಲ್ಲಾಂಗ್ ನ ಗಾಲ್ಫ್ ಕ್ರೀಡಾ ಮೈದಾನವು ನಗರದ ಹೃದಯ ಭಾಗದಿಂದ 3 ಕಿ. ಮೀ. ದೂರದಲ್ಲಿದ್ದು, ಇದು ಅಸಂಖ್ಯಾತ ಜನಸಮೂಹವನ್ನು ಸೆಳೆಯುತ್ತದೆ. ಗಾಲ್ಫ್ ಲಿಂಕ್ಸ್ ಎಂಬುದಾಗಿ ಸ್ಥಳೀಯರಿಂದ ಜನಪ್ರಿಯವಾಗಿ ಗುರುತಿಸಲ್ಪಡುವ ಇದು, 1898 ರಲ್ಲಿ ಬ್ರಿಟಿಷ್ ಪೌರಸೇವಕರಿಂದ ಮತ್ತು ಆಂಗ್ಲ ಗಾಲ್ಫ್ ಲೈನ್ ಸ್ನೇಹಿತರಿಂದ ನಿರ್ಮಿಸಲ್ಪಟ್ಟಿತು. ಪೈನ್ ತೋಪು ಮತ್ತು ರೊಡೊಡೆಂಡ್ರಾನ್ ಮರಗಳ ಮಧ್ಯದ ಜಾಗದಲ್ಲಿ, ಸಮುದ್ರ ಪಾತಳಿಯಿಂದ 5,200 ಅಡಿಗಳಷ್ಟು ಎತ್ತರದಲ್ಲಿ ಈ ಕ್ರೀಡಾಂಗಣವಿದ್ದು, ದೇಶದ ಅತೀ ಎತ್ತರದಲ್ಲಿರುವ ಕ್ರೀಡಾಂಗಣದಲ್ಲಿ ಒಂದಾಗಿದೆ. ಆರಂಭದಲ್ಲಿ, ಇದು 9 ರಂಧ್ರಗಳಿದ್ದ ಗಾಲ್ಫ್ ಮೈದಾನವಾಗಿದ್ದು, 1924 ರಲ್ಲಿ ಇದು 18 ರಂಧ್ರಗಳಿರುವ ಮೈದಾನವಾಗಿ ಪರಿವರ್ತಿತವಾಯಿತು. ಇಲ್ಲಿ ವಾರ್ಷಿಕ ಗಾಲ್ಫ್ ಸ್ಪರ್ಧೆಗಳು ನಡೆಯುತ್ತವೆ.
ಶಿಲ್ಲಾಂಗ್ ನ ಗಾಲ್ಫ್ ಕ್ರೀಡಾ ಮೈದಾನವು, ಏಶ್ಯಾದಲ್ಲಿಯೇ, ಎರಡನೆಯ ಅತೀ ದೊಡ್ಡ, ಪ್ರಾಕೃತಿಕ ಗಾಲ್ಫ್ ಮೈದಾನವೆಂಬ ಹೆಗ್ಗಳಿಕೆಯನ್ನು ಹೊಂದಿದ್ದು, ವಾರ್ಷಿಕ ಗಾಲ್ಫ್ ಸ್ಪರ್ಧೆಗಳನ್ನು ಇಲ್ಲಿ ಏರ್ಪಡಿಸಲಾಗುತ್ತದೆ ಹಾಗೂ ತನ್ಮೂಲಕ ದೇಶದ ನಾನಾ ಮೂಲೆಗಳಿಂದ ಆಗಮಿಸುವ ಗಾಲ್ಫ್ ಕ್ರೀಡಾಳುಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ. 18 ರಂಧ್ರಗಳ ಮೈದಾನದ ಸಮೀಪ ತಲೆಯೆತ್ತಿರುವ ಶಿಲ್ಲಾಂಗ್ ಗಾಲ್ಫ್ ಕ್ಲಬ್ ಸಂಸ್ಥೆಯು ಅಸ್ಸಾಂ ಶೈಲಿಯ ವಾಸ್ತುಶಿಲ್ಪದ ಅತ್ಯುತ್ತಮ ಸ್ವರೂಪವಾಗಿದ್ದು, ಪ್ರಮುಖ ಆಕರ್ಷಣೆಯಾಗಿದೆ.


Click it and Unblock the Notifications