ಕ್ರಿಸಾಲಿಸ್ ಗ್ಯಾಲರಿಯು, ಜಯಾ ಕಾಲ್ರಾ ಎಂಬ ಓರ್ವ ಸ್ಥಳೀಯ ಕಲಾವಿದರಿಂದ ನಡೆಸಲ್ಪಡುವ ಒಂದು ಸ್ಥಳೀಯ ಕಲಾ ಗ್ಯಾಲರಿಯಾಗಿದೆ. ಇದು, ಛಾಯಾಚಿತ್ರಗ್ರಾಹಕರು, ಶಿಲ್ಪಿಗಳು, ಕಲಾಕಾರರು, ಮತ್ತು ಚಿತ್ರಕಾರರ ಅವಶ್ಯಕತೆಗಳನ್ನು ಪೂರೈಸುವ ಮೂಲಕ, ತನ್ನದೇ ಅದ ಛಾಪನ್ನು ಮೂಡಿಸುವ, ಶಿಲ್ಲಾಂಗ್ ನ ಸಣ್ಣ ಪರ್ವತಧಾಮವೊಂದರಲ್ಲಿರುವ ಗ್ಯಾಲರಿಯಾಗಿದೆ. ಗ್ಯಾಲರಿಯು ವಿಶಾಲವಾದ ಸ್ಥಳಾವಕಾಶವನ್ನು ಹೊಂದಿದ್ದು, ಇದನ್ನು ಅನೇಕ ಚಿತ್ರಗಳು, ಛಾಯಾಚಿತ್ರಗಳು, ಕರಕುಶಲ ವಸ್ತುಗಳು, ಮತ್ತು ಶಿಲ್ಪಗಳ ಪ್ರದರ್ಶನಕ್ಕೆ ಉಪಯೋಗಿಸುವರು.
ಕ್ರಿಸಾಲಿಸ್ ಕಲಾ ಗ್ಯಾಲರಿಯು ಪೊಲೀಸ್ ಬಜ಼ಾರ್ ನಲ್ಲಿ, ಶಿಲ್ಲಾಂಗ್ ನಗರದ ಹೃದಯ ಭಾಗದಲ್ಲಿದ್ದು, ಸಲೋನ್ಸರ್ ಮ್ಯಾನ್ಷನ್ ನ ಎರಡನೆಯ ಮಹಡಿಯಲ್ಲಿದೆ (HDFC ಬ್ಯಾಂಕ್ ನ ಮುಖ್ಯ ಶಾಖೆಯ ಸಮೀಪ). ಜಯಾ ಕಲ್ರಾ ಶಿಲ್ಲಾಂಗ್ ನಲ್ಲಿ ವಾಸಿಸುತ್ತಿರುವ ಓರ್ವ ಪ್ರಖ್ಯಾತ ಕಲಾವಿದರು. ಇವರು ಪ್ಯಾರಿಸ್ ನಗರದಲ್ಲಿ ಏಕ ವ್ಯಕ್ತಿ ಪ್ರದರ್ಶನವನ್ನು ಏರ್ಪಡಿಸಿದ್ದ, ಈಶಾನ್ಯ ಭಾರತದ ಪ್ರಪ್ರಥಮ ಕಲಾವಿದರು. ಇವರು ಲಲಿತ ಕಲಾ ಅಕಾಡೆಮಿಯ, ಈಶಾನ್ಯ ಭಾರತದ ಪ್ರತಿನಿಧಿಯೂ ಹೌದು. ಈಕೆಯು ರಚಿಸಿದ ಚಿತ್ರಗಳು ಎಷ್ಟರಮಟ್ಟಿಗೆ ಸ್ವೀಕಾರಾರ್ಹವಾಗಿವೆ ಎಂದರೆ, ಅವುಗಳನ್ನು ಹೊಸದೆಹಲಿಯ ಪ್ರಧಾನ ಮಂತ್ರಿಯ ನಿವಾಸ, ರಾಷ್ಟ್ರಪತಿಗಳ ನಿವಾಸದಂತಹ ಪ್ರಮುಖ ಸ್ಥಳಗಳಲ್ಲಿ ಕಾಣಬಹುದು.


Click it and Unblock the Notifications