ಶ್ರೀ ಮಹಾವೀರ್ ಜೀ ದೇವಾಲಯವು ರಾಜಸ್ಥಾನದ ಅತ್ಯಂತ ಪವಿತ್ರ ಜೈನ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇದು ಸವಾಯಿ ಮಾಧೊಪುರದ ಸಮೀಪದ, ಚಂದನೂರ್ ಎಂಬ ಸಣ್ಣ ಗ್ರಾಮದ ಬಳಿ ಹರಿಯುವ ಗಂಭೀರ್ ನದಿಯ ದಂಡೆಯ ಮೇಲೆ ನೆಲೆಸಿದೆ. ಇಲ್ಲಿನ ಪ್ರಮುಕ ಆಕರ್ಷಣೆಯೆಂದರೆ ಮರಳುಗಲ್ಲಿನಲ್ಲಿ ಕೆತ್ತಲಾಗಿರುವ ಮಹಾವೀರ ವಿಗ್ರಹ.ಇದು ಪದ್ಮಾಸನ ಭಂಗಿಯಲ್ಲಿದೆ. ಇಲ್ಲಿರುವ ಇತರ ಮೂರ್ತಿಗಳೆಂದರೆ ಪುಷ್ಪ ದಂತ , ಶಾಂತಿನಾಥ ಮತ್ತು ಆದಿನಾಥ ದೇವರುಗಳ ವಿಗ್ರಹಗಳನ್ನು ಕಾಣಬಹುದು.
ಶಾಂತಿನಾಥ ಮತ್ತು ಆದಿನಾಥ ದೇವಾಲಯ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆಯುವ ವಾರ್ಷಿಕ ಉತ್ಸವದ ವೇಳೆಯು ಈ ದೇವಾಲಯಕ್ಕೆ ಭೇಟಿಕೊಡಲು ಅತ್ಯುತ್ತಮ ಅವಧಿಯಾಗಿದೆ. ಹಬ್ಬದ ಸಮಯದಲ್ಲಿ ಪೂಜ್ಯ ಮಹಾವೀರ ದೇವರ ವಿಗ್ರಹವನ್ನು ತುದಿಯವರೆಗೆ ಗಂಭೀರ್ ನದಿಯ ಪವಿತ್ರ ಜಲದಲ್ಲಿ ಮುಳುಗಿಸುತ್ತಾರೆ. ಈ ಸಮಯದಲ್ಲಿ ಈ ದೇವಾಲಯಕ್ಕೆ ತೀರ್ಥಂಕರರ ಆಶೀರ್ವಾದವನ್ನು ಪಡೆಯುವ ಸಲುವಾಗಿ, ದೇಶದ ಇತರೆಡೆಗಳಿಂದ ಜೈನ ಯಾತ್ರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಜಮಾಯಿಸುತ್ತಾರೆ.


Click it and Unblock the Notifications