ಸವಾಯಿ ಮಾಧೊಪುರದಿಂದ 50 ಕಿ.ಮೀ ದೂರದಲ್ಲಿರುವ ಚಂಬಲ್ ಮತ್ತು ಬನಸ್ ನದಿಗಳ ಸಂಗಮದಲ್ಲಿ ರಾಮೇಶ್ವರಂ ಘಾಟ್ ನೆಲೆಗೊಂಡಿದೆ. ಇದು ಇಲ್ಲಿರುವ ನಯನ ಮನೋಹರ ಪರಿಸರಕ್ಕಾಗಿ ಮತ್ತು ವನ್ಯಜೀವಿಗಳಿಂದಾಗಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಸ್ಥಳವು ಪ್ರತಿ ವರ್ಷ ಇಲ್ಲಿಗೆ ಆಗಮಿಸುವ ವಲಸೆ ಹಕ್ಕಿಗಳನ್ನು ನೋಡುವ ಅವಕಾಶವನ್ನು ಒದಗಿಸುತ್ತದೆ. ಈ ಕಾರಣಕ್ಕಾಗಿ ಇದು ವನ್ಯ ಜೀವಿ ಪ್ರಿಯರ ವಲಯದಲ್ಲಿ ಖ್ಯಾತಿ ಪಡೆದಿದೆ.
ರಾಮೇಶ್ವರಂ ಘಾಟಿನಲ್ಲಿನ ನದಿ ನೀರಿನಲ್ಲಿ ಬೃಹತ್ ಸಂಖ್ಯೆಯಲ್ಲಿ ಮೀನುಗಳು, ಮೊಸಳೆಗಳನ್ನು ಮತ್ತು ಅಳಿವಿನಂಚಿನಲ್ಲಿರುವ ನದಿ ಡಾಲ್ಫಿನ್ ಗಳನ್ನು ಸಹ ಕಾಣಬಹುದು. ರಾಮೇಶ್ವರಂ ಘಾಟಿಗೆ ಸಮೀಪದಲ್ಲಿ ತುಂಬಾ ಹಳೆಯ ದೇವಾಲಯಗಳನ್ನು ಕಾಣಬಹುದು. ಪ್ರವಾಸಿಗರು ಉದ್ದೇಶಕ್ಕಾಗಿಯಾದರು ಇಲ್ಲಿಗೆ ಭೇಟಿಕೊಡಬಹುದಾಗಿದೆ.


Click it and Unblock the Notifications