ಸರಿಸ್ಕ ರಾಷ್ಟ್ರೀಯ ಉದ್ಯಾನವನದಲ್ಲಿ ಬಹು ಸಂಖ್ಯೆಯಲ್ಲಿ ವನ್ಯ ಜೀವಿಗಳು ನೆಲೆಸಿವೆ. ಅಲ್ಲದೆ ಇಲ್ಲಿನ ಜೀವ ವೈವಿಧ್ಯ ಮತ್ತು ಸಸ್ಯ ಸಂಕುಲಗಳೆಲ್ಲವು ಕೂಡಿ ಇಲ್ಲಿನ ಜಂಗಲ್ ಸಫಾರಿಯನ್ನು ಪೂರ್ಣ ಪ್ರಮಾಣದ ರೋಮಾಂಚನ ಮತ್ತು ಮನೋರಂಜನೆಯನ್ನು ಒದಗಿಸುವ ಚಟುವಟಿಕೆಯನ್ನಾಗಿ ಮಾಡಿದೆ. ಜಂಗಲ್ ಸಫಾರಿಯೆಂದರೆ ಕಾಲ್ನಡಿಗೆ, ಚಾರಣ, ಪರ್ವತಾರೋಹಣ ಅಥವಾ ಜೀಪಿನಲ್ಲಿ ಸರಿಸ್ಕ ಕಾಡಿನ ಅಙ್ಞಾತ ಸ್ಥಳಗಳ ಒಳನೋಟವನ್ನು ಕಾಣಲು ಹೋಗುವುದಾಗಿದೆ. ಸರಿಸ್ಕವು ಹುಲಿ ಸಂರಕ್ಷಿತ ಅರಣ್ಯವಾಗಿದ್ದರು ಸಹಾ ಇಲ್ಲಿ ಸಂಬಾರ್, ಚಿತಲ್, ಕಾಡು ಹಂದಿ, ಮೊಲ, ನೀಲ್ ಗಾಯ್, ಪುನುಗಿನ ಬೆಕ್ಕು, ನಾಲ್ಕು ಕೊಂಬಿನ ಜಿಂಕೆ, ಗೌರ್ (ಭಾರತದ ಕಾಡೆಮ್ಮೆ) , ಮತ್ತು ಮುಳ್ಳು ಹಂದಿಗಳಂತಹ ವೈವಿಧ್ಯಮಯ ಪ್ರಾಣಿಗಳನ್ನು ಹೊಂದಿದೆ. ಪ್ರವಾಸಿಗರು ಇಲ್ಲಿ ನವಿಲುಗಳನ್ನು, ಬೂದು ಬಣ್ಣದ ಗೌಜುಗಗಳನ್ನು, ಮರ ಹಕ್ಕಿ (ಬಿಳಿ ಕೋಗಿಲೆ) ಮತ್ತು ಹೊಂಬಣ್ಣದ ಬೆನ್ನಿನ ಮರಕುಟುಕವಿನಂತಹ ವಿವಿಧ ಬಗೆಯ ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದು.


Click it and Unblock the Notifications