ಅಜಬ್ ಘರ್ ಕೋಟೆಯು ರಾಜಸ್ಥಾನದ ಅಲ್ವರ್ ಜಿಲ್ಲೆಯಲ್ಲಿದೆ. ಇದು ಭಂಗರ್ ಮತ್ತು ಪ್ರತಾಪ್ ಘರ್ ಕೋಟೆಯ ನಡುವೆ ನೆಲೆಸಿದೆ ಮತ್ತು ಸರಿಸ್ಕಗೆ ತುಸು ಸಮೀಪದಲ್ಲಿದೆ. ಈ ಕೋಟೆಯು ಭಂಗಾರ್ ಕೋಟೆ ಮತ್ತು ನಗರದ ಇತಿಹಾಸದೊಂದಿಗೆ ಮತ್ತು ಅದರ ಸ್ಥಳ ಪುರಾಣದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ.ಮಾಧೋ ಸಿಂಗ್ ನ ಮೊಮ್ಮಗನಾದ ಅಜಬ್ ಸಿಂಗ್ ರಾಜವತ್ ಈ ಕೋಟೆಯನ್ನು ನಿರ್ಮಿಸಿದನು. ಈ ಕೋಟೆ ತನ್ನ ಅನುಪಮ ಸೌಂದರ್ಯದಿಂದಾಗಿ ಗಮನ ಸೆಳೆಯುತ್ತದೆ. ಅಜಬ್ ಘರ್ ನಗರ ಮತ್ತು ಸುತ್ತಮುತ್ತಲ ಪ್ರದೇಶವು ಕೋಟೆಯ ಮೇಲಿನಿಂದ ಸ್ಪಷ್ಟವಾಗಿ ಕಾಣಲು ಸಿಗುತ್ತದೆ.


Click it and Unblock the Notifications