ಸಗರೇಶ್ವರ್ ವನ್ಯಜೀವಿಧಾಮವು ಸಾಂಗ್ಲಿಯ ಆಸುಪಾಸಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ವನ್ಯಜೀವಿ ಪ್ರಿಯರು ಇಲ್ಲಿ ಹೇರಳವಾಗಿರುವ ವಿವಿಧ ಬಗೆಯ ಪ್ರಾಣಿ ಮತ್ತು ಸಸ್ಯ ಸಂಕುಲಗಳನ್ನು ನೋಡುತ್ತ ಕಾಲ ಕಳೆಯಬಹುದು. ಸಾಂಗ್ಲಿಯಿಂದ 30 ಕಿ.ಮೀ ದೂರದಲ್ಲಿರುವ ಈ ವನ್ಯಜೀವಿಧಾಮವು ಮಾನವ ನಿರ್ಮಿತವಾಗಿದ್ದು, ಅರಣ್ಯೀಕರಣದ ಉದ್ದೇಶದಿಂದ ನಿರ್ಮಾಣಗೊಂಡಿದೆ.
10.87 ಚ.ಕಿ.ಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ವನ್ಯ ಜೀವಿಧಾಮವು ಚಿರತೆ, ಜಿಂಕೆ, ಕಾಡು ಹಸು, ನವಿಲು ಮತ್ತು ಮೊಲಗಳಿಗೆ ಆಶ್ರಯ ನೀಡಿದೆ. ಕೆಲವು ಬಗೆಯ ಕೀಟ ಮತ್ತು ಸರಿಸೃಪಗಳನ್ನು ಸಹ ಇಲ್ಲಿ ಕಾಣಬಹುದು.
ಇಲ್ಲಿಗೆ ಸಮೀಪದಲ್ಲಿ ಸಂಗಮೇಶ್ವರ್ ದೇವಾಲಯ ನೆಲೆಸಿದೆ.


Click it and Unblock the Notifications