ಮುಖಪುಟ » ಸ್ಥಳಗಳು » ಸಾಂಗ್ಲಿ » ತಲುಪುವ ಬಗೆ

ತಲುಪುವ ಬಗೆ

ರಸ್ತೆ ಮೂಲಕ ಸಾಂಗ್ಲಿಗೆ ಬಾಂಬೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 35 ಕಿ.ಮೀ ಒಳಗೆ ಸಾಗಿದರೆ ತಲುಪಬಹುದು. ನೀವು ಮುಂಬೈನಿಂದ ಬರುವುದಾದರೆ ಪೇಠ್ ನಾಕಾದ ಬಳಿ ಎಡಕ್ಕೆ ತಿರುವು ಪಡೆಯಿರಿ.ಬೆಂಗಳೂರಿನಿಂದ ಬರುವಿರಾದರೆ ಕೊಲ್ಹಾಪುರದ ಸಮೀಪದ ಶಿರೋಳಿ ಬಳಿ ಬಲಕ್ಕೆ ತಿರುವು ಪಡೆಯಿರಿ.ನೀವು ನಾಗ್ಪುರ್ ಅಥವಾ ರತ್ನಗಿರಿಯಿಂದ ಬರುವಿರಾದರೆ ರತ್ನಗಿರಿ- ನಾಗ್ಪುರ್ ಹೆದ್ದಾರಿ ನಿಮಗೆ ಅನುಕೂಲಕರವಾಗಿದೆ. ಅನೇಕ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಹಲವು ನಗರಗಳಿಂದ ನೀವು ಸಾಂಗ್ಲಿಗೆ ಸುಖಕರವಾಗಿ ತಲುಪಲು ನೆರವಾಗುತ್ತವೆ.