ಮಹಾನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಅಣೆಕಟ್ಟಿನ ಪ್ರದೇಶ ಸುಂದರವಾಗಿದ್ದು ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಅಣೆಕಟ್ಟು ಸಂಬಾಲ್ಪುರದಿಂದ 15 ಕಿಮೀ ದೂರದಲ್ಲಿದೆ. 1957ರಲ್ಲಿ ನಿರ್ಮಾಣಗೊಂಡಿರುವ ಈ ಅಣೆಕಟ್ಟು ಪ್ರಪಂಚದ ಅತಿ ದೊಡ್ಡ ಅಣೆಕಟ್ಟು ಎಂದೇ ಹೆಸರುವಾಸಿಯಾಗಿದೆ. ಈ ಅಣೆಕಟ್ಟು 26 ಕಿಮೀ ಉದ್ದವಾಗಿದೆ. ಅಣೆಕಟ್ಟಿನಿಂದಾಗಿ ನಿರ್ಮಾಣಗೊಂಡಿರುವ ಕೃತಕ ಕೊಳ ಇದರ ಪ್ರಾಕೃತಿಕ ಸೌಂದರ್ಯವನ್ನು ಹೆಚ್ಚಿಸಿದೆ. ಗಾಂಧಿ ಮಿನಾರ್ ಮತ್ತು ನೆಹರೂ ಮಿನಾರ್ ವೀಕ್ಷಣಾ ಗೋಪುರಗಳು ಈ ಕೊಳದ ಮತ್ತು ಸುತ್ತಲಿನ ಪ್ರದೇಶದ ಸುಂದರ ನೋಟವನ್ನು ನೋಡುಗರಿಗೆ ಉಣಬಡಿಸುತ್ತದೆ. ಸುತ್ತಲಿನ ಕೃಷಿ ಭೂಮಿ, ಮೀನುಗಾರರು ಮತ್ತು ಇಲ್ಲಿನ ಸಾವಧಾನದ ಬದುಕಿನ ಪ್ರದೇಶ ಮನಸ್ಸಿಗೆ ಮುದ ನೀಡುತ್ತದೆ. ಮಳೆಗಾಲದಲ್ಲಿ ಹಿನ್ನೀರಿನಲ್ಲಿ ನೀರು ತುಂಬಿರುವುದರಿಂದ ಇದು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.


Click it and Unblock the Notifications