ಸೇಲಂ ಹಳೆ ಬಸ್ ನಿಲ್ದಾಣದ ಹತ್ತಿರವಿರುವ ಸುಗವನೇಶ್ವರ ದೇವಸ್ಥಾನ ಈ ಪ್ರದೇಶದ ಮುಖ್ಯ ದೇವಸ್ಥಾನಗಳಲ್ಲಿ ಒಂದಾಗಿದೆ. ಇದು ಸೇಲಂ ನಗರದ ಮುಖ್ಯ ಯಾತ್ರಾಸ್ಥಳವಾಗಿದೆ. ಈ ದೇವಸ್ಥಾನವನ್ನು ಮಾಮಮ್ಮನ್ ಸುಂದರ ಪೋನಿಯನ್ ಎಂಬುವವರಿಂದ ಕ್ರಿ.ಶ 13 ನೇ ಶತಮಾನದಲ್ಲಿ ಕಟ್ಟಲಾಯಿತು. ಆಧಾರದ ಪ್ರಕಾರ, ಬ್ರಹ್ಮ ಋಷಿ ಸುಗ ಇಲ್ಲಿಯೇ ತಪಸ್ಸು ಮಾಡಿ ಪ್ರಾಯಶ್ಚಿತ್ತ ಹೊಂದಿದರು ಎನ್ನಲಾಗಿದೆ.
ಅರುಣ ಗಿರಿಧರ್ ರವರು ಮುರುಗನ್ ದೇವರಿಗೆ ಹಾಡಿದ ಹಾಡಿನಿಂದಾಗಿ ಕೂಡ ಈ ದೇವಸ್ಥಾನ ಪ್ರಖ್ಯಾತಿ ಹೊಂದಿತು. ಈ ದೇವಸ್ಥಾನದ ಒಳಗೆ ಮತ್ತು ಸುತ್ತಮುತ್ತಲು ಹಲವಾರು ಐತಿಹಾಸಿಕ ಸ್ಮಾರಕಗಳು ಮತ್ತು ಪ್ರತಿಮೆಗಳನ್ನು ಕಾಣಬಹುದು. ಸೇಲಂ ಗೆ ಹೋದವರು ಭೇಟಿ ನೀಡಲೇ ಬೇಕಾದ ಪುರಾತನ ದೇವಸ್ಥಾನ ಇದಾಗಿದೆ.