ಸಾವಿರದೆಂಟು ಲಿಂಗದ ದೇವಸ್ಥಾನವು ಅರಿಯನೂರು ಎಂಬಲ್ಲಿದೆ. ಇದು ನಗರದ ಜನಪ್ರಿಯ ದೇವಾಲಯಗಳಲ್ಲಿ ಒಂದು. ವಿನಾಯಕ ಸಮಿತಿಯು ಈ ದೇವಸ್ಥಾನವನ್ನು ನೋಡಿ ಕೊಳ್ಳುತ್ತಿದೆ. ದೇವಸ್ಥಾನವನ್ನು ಕಟ್ಟಲಾಗಿರುವ ದಿಬ್ಬದಲ್ಲಿ ಸಾವಿರದ ಎಂಟು ಲಿಂಗಗಳಿದ್ದು ಇವುಗಳ ಮುಂದೆ ಒಂದು ನಂದಿ ವಿಗ್ರಹವಿದೆ. ದೇವಾಲಯದ ತಪ್ಪಲಿನಲ್ಲಿ ಒಂದು ದೊಡ್ಡ ಗಣೇಶನ ವಿಗ್ರಹವೂ ಇದೆ. ಈ ಜಾಗವು ಪ್ರಾಶಾಂತವಾಗಿಯು ಮತ್ತು ಆಕರ್ಷಕವಾಗಿಯೂ ಇದೆ. ದೇವಸ್ಥಾನದ ಉಚ್ಛ ಭಾಗದಲ್ಲಿ ಉಮಾಂಬಿಕ ಮತ್ತು ಶ್ರೀ ಅರುಣಾಚಲ ಸುಂದರೇಶ್ವರ ಗುಡಿಗಳಿವೆ.