ಸ್ಕಂದಾಶ್ರಮವು ಸೇಲಂ ಸಿಟಿ ಯಿಂದ 2 ಕಿ.ಮೀ ದೂರದಲ್ಲಿದೆ. ಇದು ಸ್ಕಂದ ದೇವರು ಸೇರಿದಂತೆ ಹಲವಾರು ದೇವರುಗಳ ಗುಡಿಗಳನ್ನು ಹೊಂದಿದೆ. ಇದು 20 ನೇಯ ಶತಮಾನದಲ್ಲಿ ಕಂದಾಸ್ರಮಂ ಮೂಲಕ ಬೆಳಕಿಗೆ ಬಂತು, 1971 ರಲ್ಲಿ ಇದನ್ನು ಉದ್ಘಾಟಿಸಲಾಯಿತು. ಸ್ಕಂದ ಮತ್ತು ಅಷ್ಟದಶಭೂಷಣ ಮಹಾಲಕ್ಷ್ಮಿ ಇಲ್ಲಿನ ಅಗ್ರಪೀಠದಲ್ಲಿರುವ ದೇವರಾಗಿದ್ದಾರೆ.
ದೇವಸ್ಥಾನದ ಮಹಾ ಮಂಟಪದಲ್ಲಿ ಅಷ್ಟ ದಶ ಭೂಷಣ ಮಹಾಲಕ್ಷ್ಮಿಯ ವಿಗ್ರಹವನ್ನು ಇಡಲಾಗಿದೆ. ಜೊತೆಗೆ ಈ ದೇವಸ್ಥಾನವು ವೈಶಾಖ ಏಕಾದಶಿ, ನವರಾತ್ರಿ, ಫಾಲ್ಗುಣಿ ಉತ್ತರ ಮುಂತಾದವುಗಳ ಸಂದರ್ಭದಲ್ಲಿ ಯಜ್ಞ ಮಾಡಲು ಬೇಕಾಗುವ ಯಾಗ ಶಾಲೆಯನ್ನು ಕೂಡ ಹೊಂದಿದೆ. ಪ್ರತಿದಿನ ಬೆಳಿಗ್ಗೆ 8 ಘಂಟೆಗೆ ಅಭಿಷೇಕ ಮತ್ತು 11 ಘಂಟೆಗೆ ನಿತ್ಯ ಪೂಜೆ ನಡೆಯುತ್ತದೆ. ಪೂಜೆಯ ನಂತರ ಭಕ್ತಾದಿಗಳು ಸ್ಕಂದ ಮತ್ತು ಸ್ಕಂದ ಮಾತೆಯ ಆಶೀರ್ವಾದ ಪಡೆಯುತ್ತಾರೆ.