ಕುರುಂಬ ಪಟ್ಟಿ ಪ್ರಾಣಿ ಶಾಸ್ತ್ರೀಯ ಉದ್ಯಾನವನವು ಸೇಲಂ ನಿಂದ 16 ಕಿ.ಮೀ ಅಂತರದಲ್ಲಿದೆ. ಈ ಉದ್ಯಾನವನವು ಶವರೋಯನ್ ಬೆಟ್ಟದ 11.5 ಹೆಕ್ಟೇರ್ ನಷ್ಟು ಜಾಗ ಹೊಂದಿದೆ. ಈ ಜಾಗವು ಕಾನನವಾಗಿದ್ದು ಇದನ್ನು ರೂ.10 ಕೋಟಿ ಉಪಯೋಗಿಸಿ ಉದ್ಯಾನವನವನ್ನಾಗಿ ಮಾಡಲಾಗಿದೆ. ಈ ಪ್ರಾಣಿ ಸಂಗ್ರಹಾಲಯದಲ್ಲಿ ಜಿಂಕೆ, ಬಿಳಿನವಿಲುಗಳು, ಬಾನೆಟ್ ಕೋತಿ, ಸಾಂಬಾರ್ ಜಿಂಕೆ, ಸಣ್ಣ ಬೆಳ್ಳಕ್ಕಿ, ಗ್ರೇ ಪೆಲಿಕನ್, ಆಮೆಗಳು, ಬೂದು ಬಕಪಕ್ಷಿ, ಮಾರ್ಶ್ ಮೊಸಳೆ, ಒಂದು ರೀತಿಯ ಸಣ್ಣ ಗಿಳಿಗಳು, ಹಳದಿ ಪಾದದ ಹಸಿರು ಪಾರಿವಾರಗಳು ಮತ್ತು 58 ವರ್ಷದ ಆನೆಯನ್ನು ಕಾಣಬಹುದಾಗಿದೆ. ಒಂದು ಚಿಕ್ಕದಾದ ಮಕ್ಕಳ ಉದ್ಯಾನವನವು ಕೂಡ ಇಲ್ಲಿದೆ. ಈ ಸ್ಥಳವು ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯಲು ಸೂಕ್ತವಾಗಿದೆ.


Click it and Unblock the Notifications