ಮಾ ವೈಷ್ಣೋ ದೇವಿ ದೇವಾಲಯವು ರೌರ್ಕೆಲಾದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಒಂದು ಸುಂದರವಾದ ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಕಾಳಿ, ಸರಸ್ವತಿ ಮತ್ತು ಲಕ್ಷ್ಮೀ ದೇವಿಯರಿಗಾಗಿ ನಿರ್ಮಿಸಲಾಗಿದೆ. ಈ ವಿಗ್ರಹಗಳು ಈ ಬೆಟ್ಟದ ಮೇಲೆ ಸುಮಾರು 2000ನೆ ಇಸವಿಯಲ್ಲಿ ಕಾಣಿಸಿಕೊಂಡವು. ಈ ದೇವಾಲಯದ ನಿರ್ಮಾಣವು 2003ಕ್ಕೆ ಪೂರ್ಣಗೊಂಡಿತು. ಆಗ ಈ ವಿಗ್ರಹಗಳನ್ನು ಪೂಜಾ ಕೈಂಕರ್ಯಗಳನ್ನು ನೆರವೇರಿಸಲು ಇದರ ಒಳಗೆ ಪ್ರತಿಷ್ಟಾಪಿಸಲಾಯಿತು.
ಈ ಸುಂದರವಾದ ದೇವಾಲಯವನ್ನು ಜಮ್ಮುವಿನಲ್ಲಿರುವ ಮೂಲ ವೈಷ್ಣೋ ದೇವಿ ದೇವಾಲಯವನ್ನು ಹೋಲುವಂತೆಯೇ ನಿರ್ಮಾಣ ಮಾಡಲಾಗಿದೆ. ಈ ದೇವಾಲಯದ ಪಕ್ಕದಲ್ಲಿ ಒಂದು ಪ್ರಸಿದ್ಧವಾದ ದುರ್ಗಾ ದೇವಸ್ಥಾನವಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದಾಗ ಸಮೀಪದ ದುರ್ಗಾ ದೇವಾಲಯಕ್ಕು ತಪ್ಪದೆ ಭೇಟಿ ನೀಡುತ್ತಾರೆ. ಮಾ ವೈಷ್ಣೋ ದೇವಿ ದೇವಾಲಯದಲ್ಲಿ ನವರಾತ್ರಿ ಹಬ್ಬವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ.


Click it and Unblock the Notifications