ಪಣಜಿಯ ಹೊಸ ಉಪನಗರವೆಂದೆ ಹೇಳಲ್ಪಡುವ ಪ್ರದೇಶ, ಇಲ್ಹಾಸ್ ಜಿಲ್ಲೆಯಲ್ಲಿರುವ ರಿಬಂದರ್. ಬಂದರ್ ಎಂಬ ಪದದಿಂದ ರಿಬಂದರ್ ಎಂದು ಹೆಸರು ಬಂದಿದ್ದು ರಾಜರುಗಳ ಬಂದರು ಎಂದಾಗುತ್ತದೆ. ಆದರೆ ಯಾವ ರಾಜನಿಗೆ ಸಂಬಂಧಿಸಿದೆ ಎಂಬ ನಿಶ್ಚಿತ ಮಾಹಿತಿ ಲಭ್ಯವಿಲ್ಲ. ಇಲ್ಲೂ ಕೂಡ ಸಾಕಷ್ಟು ಚರ್ಚ್ ಗಳಿದ್ದು, ಏಷಿಯಾದಲ್ಲೇ ಮೊದಲ ಆಸ್ಪತ್ರೆ ಎಂದು ನಂಬಲಾಗಿರುವ ಪ್ರತಿಷ್ಠಿತ ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ತವರಾಗಿದೆ.
ಇಲ್ಲಿರುವ ಹಲವಾರು ಸೇತುವೆಗಳಲ್ಲಿ ಯಾವುದಾದರೊಂದು ಸೇತುವೆಯ ಮೇಲೆ ನಿಂತು ರಿಬಂದರ್ ನ್ನು ಅದರಲ್ಲೂ ಸಾಯಂಕಾಲದ ಸಮಯದಲ್ಲಿ ವಿಕ್ಷೀಸಿದರೆ..ಸಾಕು! ನೀವು ಮೂಕವಿಸ್ಮಿತರಾಗುವುದರಲ್ಲಿ ಯಾವುದೆ ಅನುಮಾನವಿಲ್ಲ. ಪ್ರಾಕೃತಿಕ ಹಸಿರಿನ ಸೊಬಗು ಅದ್ಭುತವಾಗಿ ಗೋಚರಿಸುತ್ತದೆ.
ರಿಬಂದರ್ ವ್ಯಾಪಾರೀಕರಣದಿಂದ ದೂರವಿದೆ. ರಿಬಂದರ್ ಗೋವಾದ ಖ್ಯಾತ ಪಾದ್ರಿಯಾದ ಫಾದರ್ ಅಂತೋನಿಯೊ ಫ್ರಾನ್ಸಿಸ್ಕೊ ಅಲ್ವರೆಸ್ ನ ಜೊತೆ ಹತ್ತಿರದ ಸಂಬಂಧ ಹೊಂದಿದ್ದು ಅವರ ಪಾರ್ಥಿವ ಶರೀರದ ಸಂಸ್ಕಾರವನ್ನು ಇಲ್ಲಿನ ಸಂತ ಮೇರಿಯ ಆರ್ಥೊಡೊಕ್ಸ್ ಸಿರಿಯನ್ ಚರ್ಚ್ ನಲ್ಲಿ ಮಾಡಲಾಗಿದೆ.
ಮಾಂಡೋವಿ ನದಿಯ ದಂಡೆಯ ಮೇಲಿರುವ ರಿಬಂದರ್, ಪಣಜಿ ಹಾಗು ಮಾಂಡೋವಿ ನದಿಯಿಂದ ಉತ್ಪನ್ನವಾದ ನದಿಮುಖ ಪ್ರದೇಶಕ್ಕೆ ಹತ್ತಿರದಲ್ಲಿದೆ. ಇದನ್ನು ಸುಲಭವಾಗಿ ತಲುಪಬಹುದಾಗಿದ್ದು, ಗೋವಾದ ಉಳಿದ ಭಾಗಗಳಿಂದ ಕ್ಯಾಬ್ ಗಳು ಲಭ್ಯ. ನೀಮಗೇನಾದರು ಪ್ರಾಕೃತಿಕ ಸೊಬಗನ್ನು ಇಷ್ಟಪಡುತ್ತಾ ಸಂಚರಿಸಲು ಬಯಸಿದರೆ ಬೈಕ್ ಗಳ ಮುಖಾಂತರ ಸುಲಭವಾಗಿ ಇಲ್ಲಿಗೆ ತಲುಪಬಹುದು.


Click it and Unblock the Notifications