ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ ರಾಣಿ ತಾಲಾಬ್ ಪ್ರಾಚೀನ ನೀರಿನ ಮೂಲವಿರುವ ತಾಣ. ಅಲ್ಲದೇ ಇಡೀ ಜಿಲ್ಲೆಯಲ್ಲಿ ಇದನ್ನು ಪವಿತ್ರ ನೀರನ್ನು ಹೊಂದಿರುವ ಜಲ ಪ್ರದೇಶ ಎಂದು ಭಾವಿಸುತ್ತಾರೆ. ಪ್ರಮುಖ ಹಬ್ಬ ಹರಿದಿನಗಳಲ್ಲಿ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಇಲ್ಲಿ ಜಮಾಯಿಸುತ್ತಾರೆ. ಈ ಮೂಲದಲ್ಲಿ ನೀರು ಉತ್ತಮವಾಗಿ ಲಭ್ಯವಿರುವುದರಿಂದ ನೀರಾವರಿಗೂ ಸಹ ಇದನ್ನು ಬಳಸಿಕೊಳ್ಳಲಾಗುತ್ತದೆ. ತಾಲಾಬ್ ರೇವಾದ ದಕ್ಷಿಣ ಭಾಗದಲ್ಲಿದ್ದು ಕೃಷಿ, ನೀರಾವರಿ ಮತ್ತು ಮೀನುಗಾರಿಕೆಯಂತಹ ಚಟುವಟಿಕೆಗಳಿಗೆ ಈ ಜಲಮೂಲವನ್ನು ಉಪಯೋಗಿಸಲಾಗುತ್ತದೆ.
ಇದರ ಪಕ್ಕದಲ್ಲಿಯೆ ಕಾಳಿ ಮಾತೆಯ ಮಂದಿರವಿದ್ದು, ದೇವಾಲಯಕ್ಕೆ ಭೇಟಿ ನೀಡಿದರೆ ಕಾಳಿತಾಯಿ ತಮ್ಮೆಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವ ಸಂಪೂರ್ಣ ನಂಬಿಕೆ ಸ್ಥಳೀಯರಲ್ಲಿದೆ. ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ಇಲ್ಲಿ ವೈಭವೋಪೇತವಾಗಿ ಹಬ್ಬವನ್ನು ಆಚರಿಸಲಾಗುತ್ತದೆ.


Click it and Unblock the Notifications