ಲಕರ್ಡ ಮತ್ತು ಅನಂತಪುರಗಳು ರಣಥಂಬೋರ್ ರಾಷ್ಟ್ರೀಯ ಉದ್ಯಾನವನನದ ಈಶಾನ್ಯ ಭಾಗದಲ್ಲಿ ನೆಲೆಗೊಂಡಿವೆ. ಇಲ್ಲಿ ಹೆಜ್ಜೇನುಗಳು ಮತ್ತು ತಾಜಾ ಹಣ್ಣುಗಳು ಯಥೇಚ್ಛವಾಗಿ ದೊರೆಯುವ ಕಾರಣದಿಂದಾಗಿ ಕರಡಿಗಳು ಇಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಅಲ್ಲದೆ ಇಲ್ಲಿನ ಹವಾಗುಣವು ಸಹ ಕರಡಿಗಳಿಗೆ ಹೇಳಿ ಮಾಡಿಸಿದಂತಿದ್ದು, ಅವುಗಳ ಸಂಖ್ಯೆಯನ್ನು ಬೆಳೆಸಿದೆ. ಅಲ್ಲದೆ ಮಂಗಗಳು, ಪಟ್ಟೆಗಳುಳ್ಳ ಕತ್ತೆ ಕಿರುಬಗಳು ಮತ್ತು ಮುಳ್ಳುಹಂದಿಗಳನ್ನು ಸಹ ನಾವು ಇಲ್ಲಿ ಕಾಣಬಹುದು.


Click it and Unblock the Notifications