ರಾನಿಖೇತ್ ನಿಂದ 8 ಕಿ.ಮೀ ದೂರದಲ್ಲಿರುವ ತಾರಿಖೇತ್ ಒಂದು ಸಣ್ಣ ಹಳ್ಳಿಯಾಗಿದೆ. ಇದು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಮಹಾತ್ಮಾ ಗಾಂಧಿ ಇಲ್ಲಿ ನೆಲೆಸಿದ್ದ ಗಾಂಧಿ ಕುಟೀಯಾಕ್ಕಾಗಿ ಬಹಳ ಪ್ರಸಿದ್ಧವಾಗಿದೆ. ಪ್ರವಾಸಿ ತಾಣದ ಜೊತೆಗೆ ಬ್ರಿಟೀಷರ ವಿರುದ್ಧ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಗುರುತೂ ಇದಾಗಿದೆ.
ಇಲ್ಲೇ ಸಮೀಪದಲ್ಲಿರುವ ಗೋಲು ದೇವತಾ ದೇವಸ್ಥಾನಕ್ಕೂ ಭೇಟಿ ನೀಡಬಹುದಾಗಿದೆ. ಈ ದೇವಸ್ಥಾನದಲ್ಲಿ ಕುಮಾವೂನ್ ಪ್ರದೇಶದ ಐತಿಹಾಸಿಕ ಮಹತ್ವ ಇರುವ ದೇವರನ್ನು ಪೂಜಿಸಲಾಗುತ್ತದೆ.


Click it and Unblock the Notifications