ಕಂಕೆ ಜಲಾಶಯವು ರಾಂಚಿಯ ಅತ್ಯಂತ ನಯನ ಮನೋಹರವಾದ ಗೊಂಡ ಬೆಟ್ಟದ ಬುಡದಲ್ಲಿ ನೆಲೆಗೊಂಡಿದೆ. ಈ ಜಲಾಶಯವನ್ನು ಕೆಲ ದಶಕಗಳ ಹಿಂದೆಯೇ ನಿರ್ಮಿಸಲಾಗಿದೆ. ಪ್ರಶಾಂತವಾದ ವಾತಾವರಣ, ಮಲಿನ ರಹಿತವಾದ ಗಾಳಿ, ಏಕಾಂತದಲ್ಲಿ ಕಾಲ ಕಳೆಯಲು ಸೂಕ್ತ ಪರಿಸರ ಮತ್ತು ಆಹ್ಲಾದಕರವಾದ ವಾತಾವರಣವು ಈ ಕೆರೆಯನ್ನು ಪ್ರವಾಸಿಗರ ವಲಯದಲ್ಲಿ ಅತ್ಯಂತ ಜನಪ್ರಿಯಗೊಳಿಸಿವೆ. ಇಲ್ಲಿನ ಸುತ್ತಮುತ್ತಲಿನ ಅದ್ಭುತ ಪ್ರಾಕೃತಿಕ ನೋಟದಿಂದಾಗಿ ಈ ಸ್ಥಳವು ವಿಹಾರಕ್ಕೆ ಬರುವವರಿಗೆ, ವನ್ಯ ಜೀವಿ ಆಸಕ್ತರಿಗೆ ಮತ್ತು ರಜೆಯ ಮೋಜು ಕಳೆಯಲು ಬರುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ.


Click it and Unblock the Notifications