Search
  • Follow NativePlanet
Share
ಮುಖಪುಟ » ಸ್ಥಳಗಳು» ಕ್ವೆಪೆಮ್

ಕ್ವೆಪೆಂ : ಉತ್ಸಾಹ ಮರುಕಳಿಸುವ ತಾಣ

3

ದಂತಕಥೆಯ ಪ್ರಕಾರ, ಒಮ್ಮೆ ಒಬ್ಬಾತನು ಕಸದಿಂದ ರಸ ಅನ್ನುವ ಹಾಗೆ ಶೂನ್ಯದಿಂದ ಕೇವಲ ಎರಡೇ ಖಂಬಗಳಿಂದ ಪ್ರಾರಂಭಿಸಿ ಒಂದು ಅದ್ಭುತವಾದ ಮನೆಯನ್ನೇ ನಿರ್ಮಾಣ ಮಾಡಿದ. ನಂತರ ಅದನ್ನು ಯಾವುದೇ ಅಪರಾಧಿಗಳು ಮತ್ತೆ ಜೀವನವನ್ನು ಹೊಸದಾಗಿ ಪ್ರಾರಂಭಿಸಲು ಪುನರ್ವಸತಿ ಬಯಸಿದ್ದರೆ ಆ ಎರಡು ಖಂಬಗಳ ಮಧ್ಯೆ ಸಾಗಿ ಹಾಗೆ ಮಾಡಬಹುದು ಎಂದು ಘೋಷಿಸಿದ. ಈ ರೀತಿಯ ಕೌತುಕಮಯ ವಿಷಯವನ್ನು ಹೊಂದಿದ ಕಟ್ಟಡವು ಕ್ವೆಪೆಮ ಪಟ್ಟಣದ ಹತ್ತಿರದಲ್ಲೆ ಇದೆ.ಇಲ್ಲಿಯ ಮತ್ತೊಂದು ಪ್ರವಾಸಿ ಆಕರ್ಷಣೆಯಾದ 'ಪಲಾಸಿಯಾ ಡೊ ಡಿಯಾವ್' ಬಂಗಲೆಯು, ಕ್ವೆಪೆಮ ಪಟ್ಟಣವನ್ನು ಶೋಧಿಸಿದ ಜೋಸ್ ಪೌಲೊನಿಂದ ನಿರ್ಮಿಸಲ್ಪಟ್ಟಿದ್ದು ಕಾಲಕ್ರಮೇಣ ಹಲವಾರು ಬಾರಿ ನವೀಕರಣಗೊಂಡಿದೆ.

ಈ ಮನೆಯು ಪೋರ್ಚುಗೀಸ ಹಾಗು ಭಾರತೀಯ ವಾಸ್ತುಶಿಲ್ಪ ಕಲೆಯ ಸುಂದರವಾದ ಮಿಶ್ರಣವನ್ನು ಹೊಂದಿದೆ. ಮಧ್ಯಾಹ್ನದ ಸಮಯವನ್ನು ಕಳೆಯಲು ಈ ಸ್ಥಳವು ಹೇಳಿ ಮಾಡಿಸಿದ ಹಾಗಿದ್ದು ಸ್ಥಳೀಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಶೈಲಿಯ ಗೋವಾದ ಊಟವನ್ನು ಉಲ್ಲಾಸದಿಂದ ಸವಿಯಬಹುದು. 'ಪಲಾಸಿಯಾ ಡೊ ಡಿಯಾವ್'ವು ಅಂದಿನ ಪೋರ್ಚುಗೀಸರ ಕಾಲದ ನೆನಪನ್ನು ಇಂದಿಗೂ ಕೂಡ ಹೊರಹೊಮ್ಮಿಸುತ್ತಿದೆ ಎಂದರೆ ತಪ್ಪಾಗಲಾರದು! ನೀವೆನಾದರು ಇಲ್ಲಿದ್ದರೆ ಇಲ್ಲಿಯ ಮಗದೊಂದು ಆಕರ್ಷಣೆಯಾದ 'ಹೋಲಿ ಕ್ರಾಸ್' ಚರ್ಚಗೆ ಭೇಟಿ ನೀಡಲು ಮರೆಯದಿರಿ.ಕ್ವೆಪೆಮ್ ನಲ್ಲಿರುವ 'ಪಲಾಸಿಯಾ ಡೊ ಡಿಯಾವ್' ಬಂಗಲೆಯು ಮಾರ್ಗೊದಿಂದ 6 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ತಲುಪಲು ಪಣಜಿ, ಮಾರ್ಗೊ ಮತ್ತು ವಾಸ್ಕೊದಿಂದ ಬಡಿಗೆಯ ಕಾರುಗಳು ಲಭ್ಯವಿದ್ದು, ಇಷ್ಟವಿದ್ದಲ್ಲಿ ದ್ವಿಚಕ್ರ ವಾಹನವನ್ನೂ ಕೂಡ ಬಳಸಬಹುದು.

ಕ್ವೆಪೆಮ್ ಪ್ರಸಿದ್ಧವಾಗಿದೆ

ಕ್ವೆಪೆಮ್ ಹವಾಮಾನ

ಉತ್ತಮ ಸಮಯ ಕ್ವೆಪೆಮ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕ್ವೆಪೆಮ್

  • ರಸ್ತೆಯ ಮೂಲಕ
    ಪ್ರಸಿದ್ಧ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 17 ರ ಮೂಲಕ ಗೋವಾ ತಲುಪಬಹುದು. ಆದರೆ ಇತ್ತಿಚೆಗೆ, ಈ, ಟು ಲೇನ್ ಹೆದ್ದಾರಿಯು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕುಖ್ಯಾತಿಗೊಳಗಾಗಿದ್ದು, ಮುಂಬೈನಿಂದ ಪುಣೆ, ಸತಾರಾ ಹಾಗು ಸಾವಂತವಾಡಿಯ ಮೂಲಕ ಪ್ರಯಾಣಿಸಬಹುದಾಗಿದೆ. ಮುಂಬೈ, ಪುಣೆಗಳಿಂದ ಹಲವಾರು ಬಸ್ ಸೇವೆಗಳು ಕೂಡ ಗೋವಾಗೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಗೋವಾ, ಭಾರತದ ಉತ್ತರ, ದಕ್ಷಿಣ ಮತ್ತು ಕೇಂದ್ರ ಭಾಗಗಳಿಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಮುಂಬೈ ನಿಂದ ಗೋವಾಗೆ ಅನುಕೂಲಕರವಾದ ಆಗಮನ ಮತ್ತು ನಿರ್ಗಮನ ವೇಳೆಗಳನ್ನು ಹೊಂದಿದ ಹಲವಾರು ರೈಲುಗಳು ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣವು ಮುಂಬೈ, ದೆಹಲಿ ಮತ್ತು ಬೆಂಗಳೂರಿನಂತಹ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಸಾಕಷ್ಟು ಕ್ಯಾಬ್ ಗಳು ದೊರೆಯುತ್ತವೆ. ಮತ್ತೊಂದು ಸಂಗತಿಯೆಂದರೆ ಈ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ನಿಲ್ದಾಣವಿಲ್ಲದ್ದರಿಂದ, ಹೊರದೇಶದ ಪ್ರವಾಸಿಗರು ಮುಂಬೈ ಅಥವಾ ದೆಹಲಿಗೆ ಬಂದು ಇಲ್ಲಿ ಬರಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
27 Apr,Mon
Return On
28 Apr,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
27 Apr,Mon
Check Out
28 Apr,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
27 Apr,Mon
Return On
28 Apr,Tue