1687 ರಲ್ಲಿ ನಿರ್ಮಿಸಲಾಗಿರುವ ಸಾವಿತ್ರಿ ದೇವಸ್ಥಾನವು ರತ್ನಗಿರಿ ಗುಡ್ಡದ ಮೇಲಿದ್ದು, ಬ್ರಹ್ಮ ದೇವನ ಪತ್ನಿಯಾದ ಸಾವಿತ್ರಿಗೆ ಸಮರ್ಪಿತವಾಗಿದೆ. ಸಾವಿತ್ರಿ ದೇವಿಯು ಪುಷ್ಕರ್ ಗೆ ಪ್ರವೇಶಿಸಿದಾಗ ಈ ಗುಡ್ಡದ ಮೇಲೆಯೇ ವಾಸಿಸಿದ್ದಳು ಎಂದು ಹೇಳಲಾಗುತ್ತದೆ. ತನ್ನ ಪತಿಯಾದ ಬ್ರಹ್ಮ ದೇವನು ಪೂಜಾವಿಧಿಗೋಸ್ಕರ ಗಾಯತ್ರಿ ಎಂಬುವವಳನ್ನು ಮದುವೆಯಾಗಿದ್ದ ಕಾರಣ, ಸಾವಿತ್ರಿಯು ಬ್ರಹ್ಮನೊಡನೆ ಇರಲು ನಿರಾಕರಿಸಿದ್ದಳು. ಈ ದೇವಸ್ಥಾನಕ್ಕೆ ಹೋಗುವ ದಾರಿಯು ಗುಡ್ಡಗಳ ಮಧ್ಯೆ ಇರುವ ಕಾರಣ, ಇದನ್ನು ತಲುಪಲು ಏನಿಲ್ಲವೆಂದರೂ ಒಂದು ಗಂಟೆಯಾದರೂ ಬೇಕೇ ಬೇಕು. ಇದು ಬ್ರಹ್ಮ ದೇವಸ್ಥಾನದ ಹಿಂಭಾಗದಲ್ಲಿದೆ. ಇಲ್ಲಿಂದ ಅದ್ಭುತವಾದ ಸರೋವರ ಹಾಗು ಅದರ ಸುತ್ತಮುತ್ತಲಿನ ಹಳ್ಳಿಗಳ ನೋಟ ನೋಡಲು ಕಾಣಸಿಗುತ್ತದೆ.


Click it and Unblock the Notifications