ಮೂಲವಾಗಿ ಇದು ಅಂಬೆರ್ ನ ರಾಜನಾದ ಮಾನ್ ಸಿಂಗ್ I ನಿಂದ ಇದು ನಿರ್ಮಿತವಾಗಿದೆ. ಪವಿತ್ರ ಪುಷ್ಕರ್ ಸರೋವರದ ಪೂರ್ವ ಭಾಗದಲ್ಲಿ ಈ ಮಹಲ್ ಕಂಡುಬರುತ್ತದೆ. ಮಾನ್ ಮಹಲ್ ನಿಂದ ಪ್ರವಾಸಿಗರು, ಪುಷ್ಕರ್ ಸರೋವರದ ದಂಡೆ ಹಾಗು ಅದರ ಸುತ್ತಮುತ್ತಲಿನ ದೇವಸ್ಥಾನಗಳ ಪರಿಪೂರ್ಣ ಚಿತ್ರಣವನ್ನು ಆನಂದಿಸಬಹುದಾಗಿದೆ. ಈ ಪುರಾತನ ಅತಿಥಿಗೃಹವನ್ನು ಇಂದು ಹೋಟೆಲ್ ಆಗಿ ಪರಿವರ್ತಿಸಲಾಗಿದ್ದು, ರಾಜಸ್ಥಾನ್ ಟೂರಿಸ್ಮ್ ಡೆವೆಲಪಮೆಂಟ್ ಕಾರ್ಪೊರೇಶನ್ (RTDC) ಇದರ ಉಸ್ತುವಾರಿಯನ್ನು ವಹಿಸಿಕೊಂಡಿದೆ.