ವಿಸಾಪುರ ಕೋಟೆಯು ಲೋಹಗಡ್-ವಿಸಾಪುರ ಜೋಡಿ ಕೋಟೆಯ ಒಂದು ಭಾಗ. ಲೋಹಗಡದ ಒಂದು ಬದಿಗಿರುವ ಈ ಕೋಟೆಯು 1,085 ಮೀ. ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ವಿಸಾಪುರ ಹಳ್ಳಿಯ ಸಮೀಪವಿರುವ ವಿಸಾಪುರ ಕೋಟೆಯನ್ನು ಪೇಶ್ವರ ಮೊದಲ ರಾಜ ಬಾಲಾಜಿ ವಿಶ್ವನಾಥನು ಕಟ್ಟಿಸಿದ್ದನು.
ಕೋಟೆಯು ಗುಹೆಗಳು, ಸ್ತಂಭಗಳು, ಆಕಾಶದೆತ್ತರದ ಗೋಡೆಗಳು ಮತ್ತು ಕಮಾನುಗಳನ್ನು ಹೊಂದಿದೆ. ಕೋಟೆಯ ಪ್ರದೇಶದಲ್ಲಿ ಹಲವು ಹನುಮಂತನ ಗುಡಿಗಳನ್ನು ಕಾಣಬಹುದು. ಈ ಕೋಟೆಯು ಪೇಷ್ವರ ಆಡಳಿತ ವೈಭವವನ್ನು ತೋರಿಸುತ್ತದೆ. ಆದರೆ ಸದ್ಯ ಇದು ಹಾಳಾಗಿದೆ.
ಈ ಐತಿಹಾಸಿಕ ಕೋಟೆಯು ಹಲವು ರಾಜರುಗಳು ಮತ್ತು ಆಡಳಿತಗಳನ್ನು ನೋಡಿದೆ. ಶಾತವಾಹನರಿಂದ ಚಾಲುಕ್ಯರವರೆಗೆ ಮತ್ತು ಮುಘಲರಿಂದ ಮರಾಠರವರೆಗೆ ಹಲವು ರಾಜರುಗಳು ಈ ಕೋಟೆಯನ್ನು ಆಳಿದ್ದಾರೆ.


Click it and Unblock the Notifications