ಪುಣೆಯ ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದು ಮುಲ್ಷಿ ಕೆರೆ. ಮುಲ್ಷಿ ಡ್ಯಾಮ್‌ನಿಂದಾಗಿ ಈ ಕೆರೆ ನಿರ್ಮಾಣಗೊಂಡಿದೆ. ನಿಮ್ಮ ಕುಟುಂಬದ ಜೊತೆ ಪಿಕ್‌ನಿಕ್‌ಗೆ ಹೋಗಲು ಉತ್ತಮವಾದ ಜಾಗವಿದು. ಸುತ್ತಲಿನ ಹಸಿರು ಆಕರ್ಷಕವಾಗಿದೆ ಮತ್ತು ಹಸಿರಿನ ವಾತಾವರಣ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ.
ಸಾಹಸಿ ಪ್ರವೃತ್ತಿಯ ಪ್ರವಾಸಿಗರಿಗೆ ಇಲ್ಲಿ ಪಕ್ಷಿ ವೀಕ್ಷಣೆ ಮತ್ತು ವಾಟರ್ ಸ್ಪೋರ್ಟ್ಸ್ ಅವಕಾಶ ಕೂಡಾ ಇದೆ.
ಇಲ್ಲಿಗೆ ಸಮೀಪದಲ್ಲಿರುವ ಕೊರೈಗಡ ಮತ್ತು ಧನಗಡ ಕೋಟೆಯನ್ನು ಕೂಡಾ ಪ್ರವಾಸಿಗರು ವೀಕ್ಷಿಸಬಹುದು.


Click it and Unblock the Notifications