ಭಯಹರನಾಥ ಧಾಮವು ಭಾರತದ ಅತ್ಯಂತ ಪ್ರಾಚೀನ ಹಾಗೂ ಐತಿಹಾಸಿಕ ಶಿವಲಿಂಗ ದೇವಾಲಯಗಳಲ್ಲಿ ಒಂದಾಗಿದೆ. ನಯನಮನೋಹರವಾದ ಗ್ರಾಮೀಣ ಪ್ರದೇಶದಲ್ಲಿ ಈ ದೇವಾಲಯವಿದೆ. ಬಕುಲಾಹಿ ನದಿಯ ದಡದ ಮೇಲೆ ಕತ್ರಾ ಗುಲಾಬ್ ಸಿಂಗ್ ಇದೆ. ಈ ದೇವಾಲಯವು ಉತ್ತರಪ್ರದೇಶ ರಾಜ್ಯದ ಅತಿ ಜನಪ್ರಿಯ ಪುಣ್ಯಕ್ಷೇತ್ರವಾಗಿದೆ.
ಈ ದೇವಾಲಯದಲ್ಲಿರುವ ಶಿವಲಿಂಗವು ಮಹಾಭಾರತದ ಕಾಲಾವಧಿಯಲ್ಲಿ ಪಾಂಡವ ಸಹೋದರರಲ್ಲಿ ಓರ್ವನಾದ ಭೀಮಸೇನನಿಂದ ಸ್ಥಾಪಿಸಲ್ಪಟ್ಟಿತು ಎಂಬ ನಂಬಿಕೆ ಇದೆ. ಬಕಾಸುರನನ್ನು ಕೊಂದ ಬಳಿಕ ಭೀಮಸೇನನು ಈ ಶಿವಲಿಂಗವನ್ನು ಸ್ಥಾಪಿಸಿದನು. ಅದ್ದರಿಂದ ಈ ದೇವಸ್ಥಾನವು ಭಗವಾನ್ ಶಂಕರನಿಗೆ ಮಾತ್ರವೇ ಸಂಬಂಧಿಸಿರದೇ, ಪೌರಾಣಿಕ ಮಹಾಭಾರತದೊಂದಿಗೂ ತಳುಕು ಹಾಕಿಕೊಂಡಿದೆ.


Click it and Unblock the Notifications