ಉತ್ತರ ಭಾರತ ಹಾಗೂ ವಸಾಹತುಶಾಹಿ ಮಾದರಿಯ ವಾಸ್ತುಶಿಲ್ಪ ಹೊಂದಿರುವ ಭೂತೈಲ್ ನಿವಾಸ್ ಕಟ್ಟಡವನ್ನು ಚುಜ್ಜಾರ್ ಸೂದ್ ಕ್ಲಾನ್ ನಂತರ ಬಂದ ಲಾಲ್ ಭೂಟಾ ಮಾಲ್ ನಿರ್ಮಾಣ ಮಾಡಿದನು. ಶತಮಾನಕ್ಕೂ ಹಳೆಯದಾದ ಸುಮಾರು ಆರು ಅಂತಸ್ತಿನ ಈ ಕಟ್ಟಡವನ್ನು ಲಾಲ್ ಭೂಟಾ ಮಾಲ್ ತನ್ನ ಆರು ಮಂದಿ ಗಂಡು ಮಕ್ಕಳಿಗಾಗಿ ನಿರ್ಮಿಸಿದ್ದನು. ಇಲ್ಲಿನ ಇಡಿ ಪ್ರದೇಶವನ್ನು ತಂಪಾಗಿರಿಸಲು ಕಟ್ಟಡದ ಸುತ್ತಲು ನಿರ್ಮಿಸಿರುವ ಸಂಕನ್ ಕೋರ್ಟ್ ಯಾರ್ಡ್ (ತಗ್ಗು ಪ್ರದೇಶ)ನಲ್ಲಿ ಸದಾ ನೀರು ತುಂಬಿರಿಸಲಾಗುತ್ತಿತ್ತು.


Click it and Unblock the Notifications