ಪಿಥೋರಗಡ್ ನಗರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಇನ್ನೊಂದು ಪ್ರಸಿದ್ಧ ಯಾತ್ರಾ ಸ್ಥಳ ಥಾಲ್ ಕೇದಾರ್. ಸಮುದ್ರ ಮಟ್ಟದಿಂದ 2000 ಮೀ ಎತ್ತರದಲ್ಲಿರುವ ಈ ದೇವಾಲಯಕ್ಕೆ ತಲುಪಲು ಸಣ್ಣ ದಾರಿಯೊಂದನ್ನು ಅನುಸರಿಸಿ ನಡೆಯಬೇಕಾಗಿದೆ. ಹಿಂದೂ ಹಬ್ಬ ಮಹಾಶಿವರಾತ್ರಿಯ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಪಿಥೋರಗಡ್ ನಿಂದ ನಕುಲೇಶ್ವರ ದೇವಾಲಯ ಮತ್ತು ಐಂಚೋಲಿ ದಾರಿಯ ಮೂಲಕ ಚಾರಣದ ಮೂಲಕವೂ ಇಲ್ಲಿಗೆ ತಲುಪಬಹುದಾಗಿದೆ.


Click it and Unblock the Notifications