Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಥೋರಗಡ್ » ಆಕರ್ಷಣೆಗಳು
  • 01ಮೊಸ್ತಾಮನು ದೇವಾಲಯ

    ಮೊಸ್ತಾಮನು ದೇವಾಲಯ

    ಮೊಸ್ತಾಮನು ದೇವಾಲಯ ಇಲ್ಲಿನ ಇನ್ನೊಂದು ಪ್ರಮುಖ ದೇವಾಲಯವಾಗಿದೆ. ಇಲ್ಲಿಗೆ ತಲುಪಬೇಕಾದರೆ ಮೊದಲ ಎಂಟು ಕಿ.ಮೀ ಗಳನ್ನು ಬಸ್ಸಿನಲ್ಲಿ ಪ್ರಯಾಣಿಸಿ ಉಳಿದ ಎರಡು ಕಿಲೋಮೀಟರ್ ದಾರಿಯನ್ನು ನಡೆಯಬೇಕಾಗಿದೆ. ಇಲ್ಲಿ ಮೋಸ್ತಾ ದೇವರ ಆರಾಧನೆ ನಡೆಯುತ್ತದೆ.

    + ಹೆಚ್ಚಿಗೆ ಓದಿ
  • 02ಮುನ್ ಶ್ಯಾರಿ

    ಮುನ್ ಶ್ಯಾರಿ

    ಮುನ್ ಶ್ಯಾರಿ ಒಂದು ಸಣ್ಣ ಪಟ್ಟಣವಾಗಿದ್ದು ಪಿಥೋರಗಡ್ ನಿಂದ 127 ಕಿ.ಮೀ ದೂರದಲ್ಲಿದೆ. ಹಿಮಾಲಯದಲ್ಲಿರುವ ಜೊಹಾರ್ ಪ್ರದೇಶಕ್ಕೆ ಇದು ಪ್ರವೇಶದ್ವಾರವಾಗಿದೆ. ಮಿಲ್ಲಮ್, ನಾಮಿಕ್ ಮತ್ತು ರಾಲಮ್ ಹಿಮನದಿಗಳು ಇಲ್ಲೇ ಸಮೀಪದಲ್ಲಿ ಹರಿದಿವೆ. ಈ ಪಟ್ಟಣ ಮಹೇಶ್ವರ್ ಕುಂಡ್ ಮತ್ತು ಥಾಮ್ರಿ ಕುಂಡ್ ಸರೋವರಗಳಿಂದ ಆವೃತ್ತವಾಗಿದೆ....

    + ಹೆಚ್ಚಿಗೆ ಓದಿ
  • 03ಪಿಥೋರಗಡ್ ಕೋಟೆ

    ಪಿಥೋರಗಡ್ ಕೋಟೆ

    ಪಿಥೋರಗಡ್ ಕೋಟೆ ಇಲ್ಲಿನ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ. ಇದು ಪಿಥೋರಗಡ್ ನಗರಕ್ಕೆ ಬಹಳ ಸಮೀಪದಲ್ಲೇ ಇದೆ. ಪ್ರವಾಸಿಗರು ಕಾಲಿ ಕುಮಾವೂನ್ ನ ಸುಂದರ ದೃಶ್ಯಗಳನ್ನು ಇಲ್ಲಿಂದ ಸವಿಯಬಹುದಾಗಿದೆ. ದಾಖಲೆಗಳ ಪ್ರಕಾರ, ಈ ಕೋಟೆಯನ್ನು ಗೋರ್ಖಾಗಳು ಪಿಥೋರಗಡ್ ನಗರವನ್ನು ಆಕ್ರಮಿಸಿದ ಬಳಿಕ 1789 ರಲ್ಲಿ ಕಟ್ಟಿದ್ದರು.

    + ಹೆಚ್ಚಿಗೆ ಓದಿ
  • 04ಕಪಿಲೇಶ್ವರ ಮಹಾದೇವ ದೇವಾಲಯ

    ಕಪಿಲೇಶ್ವರ ಮಹಾದೇವ ದೇವಾಲಯ

    ಕಪಿಲೇಶ್ವರ ಮಹಾದೇವ ದೇವಾಲಯ, ಸೋರ್ ಕಣಿವೆಯ ಒಂದು ಪ್ರಸಿದ್ಧ ದೇವಸ್ಥಾನವಾಗಿದೆ. ಇದು ತಕೌರಾ ಮತ್ತು ತಕಾರಿ ಹಳ್ಳಿಗೆಳಿಗೆ ಬಹಳ ಸಮೀಪದಲ್ಲಿದೆ. ಇದು ಗುಹೆಯ ಒಳಗೆ ಹತ್ತು ಮೀ ಒಳಗಿದೆ ಹಾಗೂ ಇಲ್ಲಿ ಶಿವದೇವರನ್ನು ಪೂಜಿಸಲಾಗುತ್ತದೆ. ಇಲ್ಲಿನ ನಂಬಿಕೆಗಳ ಪ್ರಕಾರ, ಸಂತ ಕಪಿಲ ಮಹರ್ಷಿಯು ಇಲ್ಲಿಯೇ ತಪಸ್ಸನ್ನಾಚರಿಸಿದ್ದರು. ಇದು...

    + ಹೆಚ್ಚಿಗೆ ಓದಿ
  • 05ಅರ್ಜುನೇಶ್ವರ ದೇವಾಲಯ

    ಅರ್ಜುನೇಶ್ವರ ದೇವಾಲಯ

    ಸಮುದ್ರ ಮಟ್ಟದಿಂದ 6000 ಅಡಿ ಎತ್ತರದಲ್ಲಿರುವ ಅರ್ಜುನೇಶ್ವರ, ಇಲ್ಲಿನ ಇನ್ನೊಂದು ಪ್ರಮುಖವಾದ ದೇವಾಲಯವಾಗಿದೆ. ಇದು ಪಿಥೋರಗಡ್ ದಿಂದ ಹತ್ತಿ ಕಿ.ಮೀ ದೂರದಲ್ಲಿದೆ ಹಾಗೂ ಚಾರಣದ ಮೂಲಕ ಇಲ್ಲಿಗೆ ತಲುಪಬಹುದಾಗಿದೆ. ಇಲ್ಲಿ ಕೂಡ ಶಿವನ ಆರಾಧನೆ ನಡೆಯುತ್ತದೆ. ಇಲ್ಲಿನ ಜನರ ನಂಬಿಕೆಯ ಪ್ರಕಾರ, ಪಂಚ ಪಾಂಡವರಲ್ಲಿ ಒಬ್ಬನಾದ ಅರ್ಜುನ ಈ...

    + ಹೆಚ್ಚಿಗೆ ಓದಿ
  • 06ಥಾಲ್ ಕೇದಾರ್

    ಥಾಲ್ ಕೇದಾರ್

    ಪಿಥೋರಗಡ್ ನಗರದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಇನ್ನೊಂದು ಪ್ರಸಿದ್ಧ ಯಾತ್ರಾ ಸ್ಥಳ ಥಾಲ್ ಕೇದಾರ್. ಸಮುದ್ರ ಮಟ್ಟದಿಂದ 2000 ಮೀ ಎತ್ತರದಲ್ಲಿರುವ ಈ ದೇವಾಲಯಕ್ಕೆ ತಲುಪಲು ಸಣ್ಣ ದಾರಿಯೊಂದನ್ನು ಅನುಸರಿಸಿ ನಡೆಯಬೇಕಾಗಿದೆ. ಹಿಂದೂ ಹಬ್ಬ ಮಹಾಶಿವರಾತ್ರಿಯ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ...

    + ಹೆಚ್ಚಿಗೆ ಓದಿ
  • 07ಧ್ವಜ್ ದೇವಾಲಯ

    ಧ್ವಜ್ ದೇವಾಲಯ

    ಪಿಥೋರಗಡ್ ನ ಸಮೀಪ ಇರುವ ಇನ್ನೊಂದು ಪ್ರಸಿದ್ಧ ದೇವಾಲಯ ಧ್ವಜ್ ದೇವಾಲಯ. ಇದು ಸಮುದ್ರ ಮಟ್ಟದಿಂದ 2100 ಮೀ ಎತ್ತರದಲ್ಲಿ ನೆಲೆಸಿದೆ. ಇಲ್ಲಿಂದ ಸುಂದರವಾಗಿ ಗೋಚರಿಸುವ ಹಿಮಚ್ಛಾದಿತ ಹಿಮಾಲಯದ ನೋಟವನ್ನು ನೋಡಿದವರೇ ಅನುಭವಿಸಬೇಕು. ಇಲ್ಲಿ ಹಿಂದು ದೇವರಾದ ಶಿವ ಮತ್ತು ಜಯಂತಿ ದೇವಿಯ ಪೂಜೆ ನಡೆಯುತ್ತದೆ.

    + ಹೆಚ್ಚಿಗೆ ಓದಿ
  • 08ಜೌಲ್ಜಿಬಿ

    ಜೌಲ್ಜಿಬಿ ಇಲ್ಲಿನ ಇನ್ನೊಂದು ಪ್ರಮುಖ ಪ್ರವಾಸಿ ಆಕರ್ಷಣೆ. ಇದು ಪಿಥೋರಗಡ್ ದಿಂದ 68 ಕಿ.ಮೀ ದೂರದಲ್ಲಿದೆ. ಇದು ಗೌರಿ ಮತ್ತು ಕಾಳಿ ನದಿಗಳ ಸಂಗಮ ಸ್ಥಾನವೂ ಹೌದು. ಇದಲ್ಲದೆ ಇಲ್ಲಿ ವರ್ಷಕ್ಕೊಮ್ಮೆ ಆಯೋಜನೆ ಆಗುವ ಉತ್ಸವದಲ್ಲಿ ಭಾರತ ಮತ್ತು ನೇಪಾಳ ಸೇರಿದಂತೆ ಹಲವು ಕಡೆಗಳಿಂದ ಜನರು ಆಗಮಿಸುತ್ತಾರೆ. ಇದನ್ನು ಮಕರ ಸಂಕ್ರಾಂತಿಯ...

    + ಹೆಚ್ಚಿಗೆ ಓದಿ
  • 09ನಕುಲೇಶ್ವರ ದೇವಾಲಯ

    ನಕುಲೇಶ್ವರ ದೇವಾಲಯ

    ಪಿಥೋರಗಡ್ ದಿಂದ 4 ಕಿ.ಮೀ ದೂರದಲ್ಲಿ, ನಕುಲೇಶ್ವರ ದೇವಾಲಯವಿದ್ದು ಇದು ಇಲ್ಲಿನ ಇನ್ನೊಂದು ಪ್ರಸಿದ್ಧ ದೇವಾಲಯವಾಗಿದೆ. ಇದು ಶಿಲಿಂಗ್ ಹಳ್ಳಿಯಿಂದ ಕೇವಲ ಎರಡು ಕಿ.ಮೀ ದೂರದಲ್ಲಿದೆ. ನಕುಲೇಶ್ವರ ಎಂಬ ಪದವು ನಕುಲ ಮತ್ತು ಈಶ್ವರ ಎಂಬ ಎರಡು ಪದಗಳ ಕೂಡುವಿಕೆಯಿಂದ ಉಂಟಾಗಿದೆ. ಮಹಿಷಾಸುರ ಮರ್ದಿನಿಯ ನಕುಲ ಪ್ರತಿಮೆ ಹಿಮಾಲಯ...

    + ಹೆಚ್ಚಿಗೆ ಓದಿ
  • 10ಕೋಟ್ ಗರಿ ದೇವಿ ದೇವಾಲಯ

    ಕೋಟ್ ಗರಿ ದೇವಿ ದೇವಾಲಯ

    ಕೋಟ್ ಗರಿ ದೇವಿ ದೇವಾಲಯವು ಥಾಲ್ ನಿಂದ ಒಂಭತ್ತು ಕಿ.ಮೀ ದೂರದಲ್ಲಿದೆ. ಇದನ್ನು ಭಕ್ತಾದಿಗಳು 'ಅಂತಿಮ ದಿವ್ಯ ನ್ಯಾಯಾಲಯ' ಎಂದು ಪರಿಗಣಿಸುತ್ತಾರೆ. ಇಲ್ಲಿ ಭಕ್ತರು ದೇವಿಗೆ ತಮ್ಮ ಮನೋಕಾಮನೆಗಳನ್ನು ಈಡೇರಿಸೆಂದು ಪ್ರಾರ್ಥಿಸಲು ಬರುತ್ತಾರೆ.

    + ಹೆಚ್ಚಿಗೆ ಓದಿ
  • 11ನಾರಾಯಣ ಆಶ್ರಮ

    ನಾರಾಯಣ ಆಶ್ರಮ

    ಸಮುದ್ರ ಮಟ್ಟದಿಂದ 2734 ಮೀ ಎತ್ತರದಲ್ಲಿರುವ ನಾರಾಯಣ ಆಶ್ರಮ ಎಲ್ಲಾ ಪ್ರವಾಸಿಗರ ಭೇಟಿಯ ಪಟ್ಟಿಯಲ್ಲಿರುವ ಇನ್ನೊಂದು ತಾಣ. ಇದನ್ನು ನಾರಾಯಣ ಸ್ವಾಮಿ 1936 ರಲ್ಲಿ ನಿರ್ಮಾಣ ಮಾಡಿದ್ದರು. ಇದು ಪಿಥೋರಗಡ್ ದಿಂದ 44 ಕಿ.ಮೀ ದೂರದಲ್ಲಿದೆ. ಈ ಆಶ್ರಮ ತನ್ನ ಭಕ್ತರಿಗೆ ಹಲವಾರು ಬೌದ್ಧಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು...

    + ಹೆಚ್ಚಿಗೆ ಓದಿ
  • 12ದಿದಿಹಟ್

    ದಿದಿಹಟ್

    ದಿದಿಹಟ್ ಒಂದು ಶಾಂತವಾದ ಪ್ರವಾಸಿ ತಾಣವಾಗಿದ್ದು ನಗರ ಪಂಚಾಯತ್ ಕೂಡ ಆಗಿದೆ. ಇದು ಪಿಥೋರಗಡ್ ನಿಂದ 54 ಕಿ.ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ 1725 ಮೀ ಎತ್ತರದಲ್ಲಿದೆ. ಇದರ ತುದಿಯನ್ನು ದಿಗ್ತರ್ ಎಂದು ಕರೆಯಲಾಗುತ್ತದೆ. ಈ ಸ್ಥಳದ ಹೆಸರು ಕುಮಾವೂನಿ ಪದ ದಂಡ್ ನಿಂದ ಬಂದಿದೆ ಇದರ ಅರ್ಥ ಸಣ್ಣ ದಿಣ್ಣೆ ಎಂಬುದಾಗಿದೆ....

    + ಹೆಚ್ಚಿಗೆ ಓದಿ
  • 13ಝುಲಾಘಾಟ್

    ಝುಲಾಘಾಟ್

    ಪಿಥೋರಗಡ್ ನಿಂದ 36 ಕಿ.ಮೀ ದೂರದಲ್ಲಿರುವ ಝುಲಾಘಾಟ್ ಭಾರತ ಮತ್ತು ನೇಪಾಳ ಗಡಿಯಲ್ಲಿರುವ ಹಳ್ಳಿಯಾಗಿದೆ. ಕಾಳಿ ನದಿ ಇಲ್ಲಿಂದ ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತದೆ. ಕಾಳಿ ನದಿಯ ಮೇಲೆ ಒಂದು ಸಣ್ಣ ಸೇತುವೆಯೂ ಇಲ್ಲಿದ್ದು, ಈ ಸೇತುವೆ ಭಾರತ ಮತ್ತು ನೇಪಾಳವನ್ನು ಜೋಡಿಸುತ್ತದೆ.

    ಇಲ್ಲಿರುವ ಮಹೇಶಾನಿ ದೇವಸ್ಥಾನಕ್ಕೆ...

    + ಹೆಚ್ಚಿಗೆ ಓದಿ
  • 14ಸ್ಕೀಯಿಂಗ್

    ಸ್ಕೀಯಿಂಗ್

    ಸ್ಕೀಯಿಂಗ್, ಪಿಥೋರಗಡ್ ಗೆ ಭೇಟಿ ನೀಡುವ ಪ್ರವಾಸಿಗರ ಫೆವರಿಟ್ ಆಟ/ಚಟುವಟಿಕೆ. ಬೆಟುಲಿ ಧಾರ್ ಪಿಥೋರಗಡ್ ನ ಅತ್ಯಂತ ಪ್ರಸಿದ್ಧ ಸ್ಕೀ ಸ್ಲೋಪ್ ಆಗಿದೆ. ಪ್ರವಾಸಿಗರು ಚಿಪಲ್ ಕೋಟ್ ನಲ್ಲಿ ಸ್ಕೀಯಿಂಗ್ ನ ಅನುಭವ ಪಡೆಯಬಹುದು. ಇದು ಸಮುದ್ರ ಮಟ್ಟದಿಂದ ಸುಮಾರು 3090 ಮೀ ಎತ್ತರದಲ್ಲಿದೆ. ಇದರ ಜೊತೆಗೆ ಇಲ್ಲಿರುವ ಖಾಲಿಯಾ ಟಾಪ್ ಕೂಡ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri