ಪೌಡಿ ಯಿಂದ 19 ಕಿ.ಮೀ ದೂರದಲ್ಲಿರುವ ಖಿರ್ಸು ಇಲ್ಲಿನ ಇನ್ನೊಂದು ಪ್ರಮುಖ ತಾಣ. ಖಿರ್ಸುವಿನಿಂದ ಕಾಣುವ ಕೇಂದ್ರ ಹಿಮಾಲಯದ ಸೊಬಗು ಮತ್ತೆಲ್ಲಿಂದಲೂ ಕಾಣದು. ಸಮುದ್ರ ಮಟ್ಟದಿಂದ 1700 ಮೀ ಎತ್ತರದಲ್ಲಿರುವ ಖಿರ್ಸು ಒಂದು ಶಾಂತವಾದ ತಾಣವಾಗಿದೆ. ಶಾಂತವಾದ ಸುತ್ತಲಿನ ವಾತಾವರಣ, ಹಕ್ಕಿಗಳ ಚಿಲಿಪಿಲಿ-ಕಲರವ ಹಾಗೂ ಓಕ್ ಮತ್ತು ದೇವದಾರುವಿನಿಂದ ಆವೃತವಾಗಿರುವ ಮರಗಳು, ಒಟ್ಟಾರೆಯಾಗಿ ಈ ಸ್ಥಳವನ್ನು ಮತ್ತಷ್ಟು ಸುಂದರವನ್ನಾಗಿಸಿದೆ. ಇಲ್ಲಿರುವ ಹಸಿರು ಸೇಬು ಹಣ್ಣುಗಳ ತೋಟ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಇಲ್ಲೇ ಸಮೀಪದಲ್ಲಿ ಘಾಂದಿಯಾಲ್ ದೇವತೆಯ ಹಳೆಯ ದೇವಸ್ಥಾನವಿದೆ. ಪ್ರವಾಸಿ ವಿಶ್ರಾಂತಿ ಧಾಮ ಮತ್ತು ಅರಣ್ಯ ಇಲಾಖೆಯ ವಿಶ್ರಾಂತಿ ಧಾಮ ಇಲ್ಲಿ ವಸತಿ ಸೌಕರ್ಯ ಒದಗಿಸುತ್ತದೆ.


Click it and Unblock the Notifications