ಆಂಗ್ಲಿಂಗ್ (ಗಾಳ ಹಾಕಿ ಮೀನು ಹಿಡಿಯುವುದು), ನಾಯರ್ ನದಿಯ ಮೇಲೆ ಇಲ್ಲಿನ ಪ್ರವಾಸಿಗರು ಇಷ್ಟಪಡುವ ಮನೋಲ್ಲಾಸಕ ಚಟುವಟಿಕೆಯಾಗಿದೆ. ಇಲ್ಲಿನ ನದಿಯು ಈಜಾಡಲೂ ಉತ್ತಮವಾಗಿರುತ್ತದೆ. ಸುತ್ತಮುತ್ತಲಿನ ನಾಯರ್ ಕಣಿವೆ ನಿಸರ್ಗ ಸಹಜ ಸೌಂದರ್ಯದಿಂದ ಆಕರ್ಷಕವಾಗಿದೆ. ಸತ್ಪುಲಿ ಮೀನುಗಾರಿಕೆ ಮತ್ತು ಈಜಾಡಲು ಹೆಸರುವಾಸಿಯಾಗಿದೆ. ಇದನ್ನು ಪ್ರವಾಸಿ ತಾಣವಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಬೇಕಾದಷ್ಟು ಅವಕಾಶಗಳಿವೆ. ಇಲ್ಲಿ ಸರ್ಕಾರಿ ಮತ್ತು ಖಾಸಗಿ ಎರಡೂ ರೀತಿಯ ವಸತಿ ವ್ಯವಸ್ಥೆಗಳಿವೆ.


Click it and Unblock the Notifications