Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಣಿಪತ್ » ಆಕರ್ಷಣೆಗಳು » ಪಾಣಿಪತ್ ವಸ್ತು ಸಂಗ್ರಹಾಲಯ

ಪಾಣಿಪತ್ ವಸ್ತು ಸಂಗ್ರಹಾಲಯ, ಪಾಣಿಪತ್

1

ಹರಿಯಾಣ ರಾಜ್ಯವು ಅಸ್ತಿತ್ವಕ್ಕೆ ತಂದಿರುವ ಪಾಣಿಪತ್ ಯುದ್ಧ ಸ್ಮಾರಕ ಸಂಸ್ಥೆಯವರು ಈ ಐತಿಹಾಸಿಕವಾದ ಮೂರು ಯುದ್ಧಗಳ ನೆನಪಿಗಾಗಿ ಒಂದು ವಸ್ತು ಸಂಗ್ರಹಾಲಯವನ್ನು ಸ್ಥಾಪನೆ ಮಾಡಿದ್ದಾರೆ. ಇದು ದೇಶದ ಇತಿಹಾಸದಲ್ಲಿ ನಡೆದ ಪ್ರಮುಖ ಯುದ್ಧದ ಕುರಿತಾಗಿ ಬೆಳಕು ಚೆಲ್ಲುತದೆ.

ಈ ಮೂರು ಯುದ್ಧದ ಇತಿಹಾಸ, ಇದರಲ್ಲಿ ಅಡಕಗೊಂಡಿದ್ದ ಕಲೆ, ಕುಶಲ ವಸ್ತುಗಳು ಮತ್ತು ಉತ್ಖನನದಲ್ಲಿ ದೊರೆತ ವಸ್ತುಗಳನ್ನೆಲ್ಲವನ್ನು ಇಲ್ಲಿ ಸಂರಕ್ಷಿಸಿಡುವ ಸಲುವಾಗಿ ಈ ವಸ್ತು ಸಂಗ್ರಹಾಲಯವು ಅಸ್ತಿತ್ವಕ್ಕೆ ಬಂದಿತು.

ಈ ವಸ್ತು ಸಂಗ್ರಹಾಲಯವು ಶಿಲೆಗಳು, ಪ್ರಾಚೀನ ವಸ್ತುಗಳು, ಆಯುಧಗಳು, ಬಾಣಗಳು, ಕತ್ತಿಗಳು, ಮಡಿಕೆಗಳು, ಆಭರಣಗಳು, ಪ್ರಮುಖ ದಾಖಲೆಗಳು, ಹಸ್ತ ಪ್ರತಿಗಳು, ಕಲಾ ವಸ್ತುಗಳು, ಕರ ಕುಶಲ ವಸ್ತುಗಳು, ನಕಾಶೆಗಳು, ಛಾಯಚಿತ್ರಗಳು ಮತ್ತು ಚಿತ್ರಿಕೆಗಳಂತಹ ವೈವಿಧ್ಯಮಯ ವಸ್ತುಗಳ ಭಂಡಾರವನ್ನೆ ತನ್ನೊಳಗೆ ಹೊಂದಿದೆ. ಇವುಗಳೆಲ್ಲದರ ಜೊತೆಗೆ ಈ ವಸ್ತು ಸಂಗ್ರಹಾಲಯವು ಮುಸ್ಲಿಂ ದಾಳಿಕೋರರನ್ನು ನಮ್ಮ ದೇಶದಿಂದ ಹೊರಗೆ ಅಟ್ಟುವ ಸಲುವಾಗಿ ಶೌರ್ಯ ಮತ್ತು ಬಲಿದಾನಗಳನ್ನು ಮೆರೆದ ನಮ್ಮ ದೇಶದ ವೀರಾಧಿವೀರರನ್ನು ಸ್ಮರಿಸುವ ಮತ್ತು ಅವರ ದೇಶ ಪ್ರೇಮವನ್ನು ಸಾರುವ ವೇದಿಕೆಯಾಗಿ ಕಂಗೊಳಿಸುತ್ತಿದೆ.

ಇಲ್ಲಿ ಹುತಾತ್ಮರಾಗಿ ವೀರ ಸ್ವರ್ಗವನ್ನು ಏರಿದವರ ಪಟ್ಟಿಯಲ್ಲಿ ನಮಗೆ ಮುಂಚೂಣಿಯಲ್ಲಿ ಕೆಲವು ಹೆಸರುಗಳು ದೊರೆಯುತ್ತವೆ. ಅವರೇ ಹರಿಯಾಣದ ರೆವರಿಯ ರಾಜ  ಸಾಮ್ರಾಟ್ ಹೇಮ್ ಚಂದ್ರ ವಿಕ್ರಾಮಾದಿತ್ಯ ಇವರು ಪಾಣಿಪತ್‍ಗೆ ಸ್ಥಳೀಯರು, ಇವರ ಜೊತ್ಗೆ ಹೋರಾಡಿದ ರಾಜಸ್ಥಾನದ ಭರತ್‍ಪುರದ ರಾಜ ಸುರಜ್ ಮಲ್, ಪಟಿಯಾಲಾದ ಮಹಾರಾಜ ಮತ್ತು ಸದಾಶಿವ್ ರಾವ್ ಭಾವು, ಟುಕುಜ್ ಶಿಂಧೆ, ವಿಶ್ವಾಸ್ ರಾವ್ ಪೇಶ್ವೆರವರನ್ನು ಒಳಗೊಂಡ ಮರಾಠರು ಮತ್ತು ಇನ್ನಿತರ ಧೀರ ಯೋಧರು ಇಲ್ಲಿ ತಮ್ಮ ಬಲಿದಾನವನ್ನು ಮಾಡಿದರು. ಈ ಪಾಣಿಪತ್  ವಸ್ತು ಸಂಗ್ರಹಾಲಯವು ಬಿನಿಜೋಲ್‍ನಲ್ಲಿರುವ ಕ್ಯನಲ್ ರೆಸ್ಟ್ ಹೌಸ್‍ನಿಂದ ಕೇವಲ 5 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed