Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಣಿಪತ್ » ಆಕರ್ಷಣೆಗಳು » ಕಾಲಾ ಅಂಬ್

ಕಾಲಾ ಅಂಬ್, ಪಾಣಿಪತ್

3

ಕಾಲಾ ಅಂಬ್ ಎಂಬುದನ್ನು 1761ರಲ್ಲಿ ನಡೆದ ಮೂರನೆಯ ಪಾಣಿಪತ್ ಯುದ್ಧ ನೆನಪಿಗಾಗಿ ನಿರ್ಮಿಸಲಾದ ಒಂದು ಸ್ಮಾರಕವಾಗಿದೆ. ಈ ಯುದ್ಧವು ಮರಾಠರು ಮತ್ತು ಅಹಮದ್ ಶಾ ಅಬ್ದಾಲಿಯವರ ನಡುವೆ ನಡೆದಿತ್ತು. ಈ ಯುದ್ಧದಲ್ಲಿ ಮರಾಠರನ್ನು ಸದಾಶಿವರಾವ್ ಭಾವು, ವಿಶ್ವಾಸ್‍ರಾವ್ ಮತ್ತು ಮಹಾದಾಜಿ ಶಿಂಧೆಯವರು ಮುನ್ನಡೆಸಿದ್ದರು. ಈ ಯುದ್ಧ ನಡೆದ ಸ್ಥಳವನ್ನು ಒಂದು ಮಾವಿನ ಮರದಿಂದ ಗುರುತಿಸಲಾಗುತ್ತಿತ್ತು.

ಕುತೂಹಲಕರವಾದ ವಿಚಾರವೇನೆಂದರೆ ಈ ಮಾವಿನ ಮರದಲ್ಲಿ ಬಿಡುವ ಹಣ್ಣುಗಳು ಕಪ್ಪು ಬಣ್ಣದಲ್ಲಿದ್ದವಂತೆ. ನಂಬಿಕೆಗಳ ಪ್ರಕಾರ ಈ ಮರವು ಯುದ್ಧದಲ್ಲಿ ಸತ್ತ ಸೈನಿಕರ ರಕ್ತವು ನೆನೆದ ಮಣ್ಣಿನಲ್ಲಿ ಬೆಳೆದಿರುವುದರಿಂದ ಈ ಬಣ್ಣ ಬರುತ್ತದೆ ಎಂದು ಹೇಳುತ್ತಾರೆ. ಈ ಮರವು ತುಂಬಾ ಹಿಂದೆಯೇ ಕಾಣದಾಯಿತು. ಈ ಸ್ಮಾರಕವನ್ನು ಕಪ್ಪು ಸ್ಮಾರಕವೆಂದು ಕರೆಯುತ್ತಾರೆ. ಬಹುಶಃ ಇಲ್ಲಿ ಬೆಳೆಯುವ ಕಡು ಹಸಿರು ಬಣ್ಣದ ಎಲೆಗಳ ಗೊಂಚಲಿನಿಂದಾಗಿ ಈ ಹೆಸರನ್ನು ಕರೆಯುತ್ತಿರಬಹುದು.

ಇಲ್ಲಿ ಇಟ್ಟಿಗೆಗಳಿಂದ ಕೂಡಿರುವ ಒಂದು ಸ್ತಂಭವಿದ್ದು, ಇದಕ್ಕೆ ಕಬ್ಬಿಣದ ಸರಳನ್ನು ಸಹ ಅಳವಡಿಸಿದ್ದಾರೆ. ಈ ಸ್ತಂಭದಲ್ಲಿ ಇಂಗ್ಲೀಷ್ ಮತ್ತು ಉರ್ದುವಿನಲ್ಲಿ ಪಾಣಿಪತ್ ಯುದ್ಧದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಶಾಸನವನ್ನು ಸಹ ನಾವು ನೋಡಬಹುದು. ಹರಿಯಾಣ ರಾಜ್ಯಪಾಲರ ಆಡಳಿತಕ್ಕೆ ಒಳಪಟ್ಟಿರುವ ಒಂದು ಸ್ಂಘವು ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed