ಸೋಜತ್ ಎಂಬುದು ಪಾಲಿ ಜಿಲ್ಲೆಯಲ್ಲಿ ಹರಿಯುವ ಸುಕ್ರಿ ನದಿ ದಂಡೆಯ ಮೇಲೆ ನೆಲೆಸಿರುವ ಒಂದು ನಗರವಾಗಿದೆ. ಈ ನಗರವು ಪುರಾತನ ಕಾಲದಲ್ಲಿ ತಾಮ್ರವತಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಈ ಸ್ಥಳವು ಇಲ್ಲಿರುವ ಕೋಟೆ, ಸೇಜಲ್ ಮಾತಾ ದೇವಾಲಯ ಮತ್ತು ಚಾಮುಂಡ ಮಾತಾ ದೇವಾಲಯಗಳಿಗಾಗಿ ಖ್ಯಾತಿ ಪಡೆದಿದೆ.
ಈ ನಗರದ ಬಹು ದೊಡ್ಡ ಆಕರ್ಷಣೆಯೆಂದರೆ ಇಲ್ಲಿ ಇರುವ ಮೆಹಂದಿ ತೋಟಗಳು. ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ತಮ್ಮ ಕೈ ಮತ್ತು ಕಾಲುಗಳಿಗೆ ಹಾಕಿಸಿಕೊಳ್ಳಲಾಗುವ ಈ ಪ್ರಸಾದನವನ್ನು ಇಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಈಗ ಇದು ಅಂತಾರಾಷ್ಟ್ರೀಯ ಫ್ಯಾಶನ್ ಪಡೆದಿದೆ. ಹಾಗಾಗಿ ಬಹುತೇಕ ವಿದೇಶಿ ಪ್ರವಾಸಿಗರು ಇದನ್ನು ಹೇಗೆ ಬೆಳೆಯುತ್ತಾರೆ ಎಂದು ಕಣ್ಣಾರೆ ನೋಡಲು ಮೌಂಟ್ ಅಬುವಿನ ಮೂಲಕ ಇಲ್ಲಿಗೆ ಭೇಟಿ ಕೊಡುತ್ತಾರೆ.
ಪ್ರವಾಸಿಗರು ಇಲ್ಲಿ ಪೀರ್ ಮಸ್ತಾನ್ ರವರ , ರಾಮ್ ದೇವ್ ಜೀ ದೇವಾಲಯ ಮತ್ತು ಕುರ್ಕಿ ಕೋಟೆಯನ್ನು ಸಹ ನೋಡಬಹುದು. ಕೃಷ್ಣನಿಗಾಗಿ ತನ್ನ ಬದುಕನ್ನು ಮುಡಿಪಾಗಿಟ್ಟ ಮಹಾ ಭಕ್ತೆ ಮೀರಾಬಾಯಿ ಜನಿಸಿದ್ದು ಇದೇ ಊರಿನಲ್ಲಿ ಎಂಬುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.


Click it and Unblock the Notifications