Search
  • Follow NativePlanet
Share
» »Indian Railways:ಫಸ್ಟ್‌ ಕ್ಲಾಸ್‌ ಕಂಪಾರ್ಟ್‌ಮೆಂಟ್‌ನಲ್ಲಿ ಸಿಗಲಿರುವ ಈ 6 ಸೌಲಭ್ಯಗಳ ಬಗ್ಗೆ ಕೇಳಿದ್ರೆ ಎಲ್ಲರಿಗೂ ಖುಷಿಯಾಗುತ್ತೆ

Indian Railways:ಫಸ್ಟ್‌ ಕ್ಲಾಸ್‌ ಕಂಪಾರ್ಟ್‌ಮೆಂಟ್‌ನಲ್ಲಿ ಸಿಗಲಿರುವ ಈ 6 ಸೌಲಭ್ಯಗಳ ಬಗ್ಗೆ ಕೇಳಿದ್ರೆ ಎಲ್ಲರಿಗೂ ಖುಷಿಯಾಗುತ್ತೆ

ರೈಲು ಪ್ರಯಾಣದ ಮೋಜು ಅನುಭವಿಸಿದವರಿಗೇ ಗೊತ್ತು. ಕಂಫರ್ಟಬಲ್‌ ಜರ್ನಿ ಬಯಸುವುದಾದರೆ ನೀವು ರೈಲು ಮಾತ್ರ ಹತ್ತಬೇಕು. ಅಂದಹಾಗೆ ರೈಲಿನಲ್ಲಿ ಎಲ್ಲಾ ಕೋಚ್‌ಗಳು ನಾವಂದುಕೊಂಡಂತೆ ಇರುವುದಿಲ್ಲ. ಆದರೆ ರೈಲಿನಲ್ಲಿ ನಮ್ಮ ಪ್ರಯಾಣ ಸಂತೋಷ ಹಾಗೂ ಆಹ್ಲಾದಕವಾಗಿರಬೇಕೆಂದರೆ ಫಸ್ಟ್‌ ಕ್ಲಾಸ್‌ ಕೋಚ್‌ ಬುಕ್‌ ಮಾಡಬೇಕು. ಹೌದು, ರೈಲುಗಳಲ್ಲಿ ಪ್ರಥಮ ದರ್ಜೆಯ ಕೋಚ್‌ಗಳು ಆರಾಮ ಪ್ರಯಾಣಕ್ಕೆ ಬಹಳ ಸೂಕ್ತ. ಆದರೆ ಗಮನಿಸಿ, ಈ ಕೋಚ್‌ಗಳ ಸೌಲಭ್ಯ ಎಲ್ಲಾ ರೈಲು ಮಾರ್ಗದಲ್ಲಿ ಇರುವುದಿಲ್ಲ.

ಭಾರತದಲ್ಲಿ, ಕೆಲವು ಮಾರ್ಗಗಳಲ್ಲಿನ ರೈಲುಗಳು ಮಾತ್ರ ಪ್ರಥಮ ದರ್ಜೆ ಎಸಿ ಕೋಚ್‌ಗಳನ್ನು ಹೊಂದಿವೆ. ಸಾಮಾನ್ಯವಾಗಿ ಮೆಟ್ರೋಪಾಲಿಟನ್ ನಗರಗಳಿಗೆ ತೆರಳುವ ರೈಲುಗಳಲ್ಲಿ ಎಸಿ ಸೌಕರ್ಯ ಹೊಂದಿರುವ ಫಸ್ಟ್‌ ಕ್ಲಾಸ್‌ ಕೋಚ್‌ಗಳಿರುತ್ತವೆ. ಇದೊಂದೇ ಸೌಲಭ್ಯವಲ್ಲ, ಕೋಚ್‌ಗಳಲ್ಲಿ ಹಲವು ಸೌಲಭ್ಯಗಳು ಲಭ್ಯವಿದ್ದು, ಪ್ರಯಾಣದ ಸಮಯದಲ್ಲಿ ವಿಶ್ರಾಂತಿಗೆ ಮತ್ತು ಸುರಕ್ಷಿತವಾಗಿಯೂ ಇರುತ್ತದೆ. ನೀವು ಇನ್ನೂ ಈ ಬೋಗಿಗಳಲ್ಲಿ ಪ್ರಯಾಣಿಸಿಲ್ಲ ಎಂದಾದಲ್ಲಿ, ಇವುಗಳಲ್ಲಿ ಲಭ್ಯವಿರುವ ಈ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ...

ಬಹಳ ಸ್ವಚ್ಛ

ನಾವು ರೈಲುಗಳಲ್ಲಿ ಶೌಚಾಲಯ ನೋಡಿದ ಮೇಲೆಯೇ ತಿಳಿಯುವುದು ಆ ಕೋಚ್‌ ಎಷ್ಟು ಸ್ವಚ್ಛವಾಗಿದೆಯೆಂದು, ರೈಲು ಹೊರಡುವ ಮುನ್ನ ಮಾತ್ರ ಸ್ವಚ್ಛತೆ ಕಾಣಬಹುದು. ಆ ನಂತರ ಡಸ್ಟ್‌ ಬಿನ್‌ಗಳಲ್ಲಿ ಹಸಿ ಕಸ ಆಚೆ ಬಂದಿರುತ್ತದೆ. ಶೇಂಗಾ ಸಿಪ್ಪೆ, ಮಂಡಕ್ಕಿ, ಚಿಪ್ಸ್‌ ಕವರ್‌ ಹೀಗೆ ಎಲ್ಲ ಕಸ ಸೀಟ್‌ಗಳ ಮೇಲೆ ಎಲ್ಲೆಂದರಲ್ಲಿ ಎಸೆದಿರುತ್ತಾರೆ. ಆದರೆ ಫಸ್ಟ್‌ ಕ್ಲಾಸ್‌ ಕೋಚ್‌ಗಳಲ್ಲಿ ತೀರ ಈ ಮಟ್ಟಿಗೆ ಗಲೀಜು ಕಾಣಿಸುವುದಿಲ್ಲ. ಸಾಧ್ಯವಾದಷ್ಟು ಕ್ಲೀನ್‌ ಆಗಿಯೇ ಇರುತ್ತದೆ. ಕುಳಿತುಕೊಳ್ಳುವ ಸ್ಥಳದಿಂದ ಶೌಚಾಲಯದವರೆಗೆ ಇದು ತುಂಬಾ ಸ್ವಚ್ಛವಾಗಿರುತ್ತದೆ. ಇದನ್ನು ನೀವು ಯಾವಾಗ ಬೇಕಾದರೂ ಆರಾಮವಾಗಿ ಬಳಸಬಹುದು.

firstclasscompartmentsofindianrailways

ಪ್ರೈವಸಿ ಇರುತ್ತದೆ

ನೀವು ಪ್ರಥಮ ದರ್ಜೆ ಕ್ಯಾಬಿನ್‌ನಲ್ಲಿ ಪ್ರೈವಸಿ ಕಾಣಬಹುದು. ಅದರಲ್ಲೂ ನೀವು ನಿಮ್ಮ ಮಕ್ಕಳು ಅಥವಾ ಸಂಗಾತಿಯೊಂದಿಗೆ ಪ್ರಯಾಣಿಸುತ್ತಿದ್ದರೆ, ಸುರಕ್ಷತೆಯ ದೃಷ್ಟಿಯಿಂದ ಇಂತಹ ವಿಭಾಗಗಳು ಒಳ್ಳೆಯದು. ಇದರಿಂದಾಗಿ ದೂರದ ಪ್ರಯಾಣವೂ ಸರಾಗವಾಗಿ ಸಾಗುತ್ತದೆ.

ಉಚಿತ ಆಹಾರ ಮತ್ತು ಪಾನೀಯಗಳು

ಕೆಲವು ರೈಲಿನ ಪ್ರಥಮ ದರ್ಜೆ ಕೋಚ್‌ಗಳ ಟಿಕೆಟ್‌ಗಳಲ್ಲಿ ಈಗಾಗಲೇ ಆಹಾರ ಮತ್ತು ಪಾನೀಯವನ್ನು ಸೇರಿಸಿಕೊಂಡು ಹಣವನ್ನು ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ, ನೀವು ಪ್ರಯಾಣದ ಉದ್ದಕ್ಕೂ ಉಚಿತ ಆಹಾರ ಮತ್ತು ಪಾನೀಯಗಳನ್ನು ಪಡೆಯುತ್ತೀರಿ. ಮತ್ತು ಈ ಆಹಾರ ಪದಾರ್ಥಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ನೀವು ಸಂಪೂರ್ಣ ಪ್ರಯಾಣವನ್ನು ಆಹಾರ ಮತ್ತು ಪಾನೀಯಗಳ ಸೇವನೆ ಮೂಲಕ ಆನಂದಿಸುತ್ತೀರಿ. ಬೆಳಗಿನ ಚಹಾ ಮತ್ತು ಬಿಸ್ಕತ್‌ನಿಂದ ಹಿಡಿದು ಪಕೋಡಾ ಮತ್ತು ಸ್ಯಾಂಡ್‌ವಿಚ್‌ಗಳವರೆಗೆ ನೆಚ್ಚಿನ ತಿನಿಸುಗಳು ಆಹಾರ ಮೆನುವಿನಲ್ಲಿ ಸೇರಿರುತ್ತವೆ. ನೀವು ಉಪಹಾರ ಮತ್ತು ತಿಂಡಿಗಳಲ್ಲಿ ವಿವಿಧ ಆಯ್ಕೆಗಳನ್ನು ಸಹ ಪಡೆಯುತ್ತೀರಿ. ಇದಲ್ಲದೆ, ಮಧ್ಯಾಹ್ನ ಮತ್ತು ರಾತ್ರಿಯ ಊಟವೂ ಲಭ್ಯವಿದೆ. ಇದರಲ್ಲಿ ಸಂಪೂರ್ಣ ಊಟಕ್ಕೆ ಅನೇಕ ಭಕ್ಷ್ಯಗಳನ್ನು ಸೇರಿಸಲಾಗುತ್ತದೆ.

ಡೆಸರ್ಟ್‌ ಮರೆಯಬೇಡಿ

ನಿಮಗೆ ಗೊತ್ತಾ...ಭೋಜನದ ಜೊತೆಗೆ ಪ್ರಥಮ ದರ್ಜೆ ಕೋಚ್‌ಗಳಲ್ಲಿ ಸಿಹಿಭಕ್ಷ್ಯವನ್ನು ಸಹ ನೀಡಲಾಗುತ್ತದೆ. ಐಸ್‌ ಕ್ರೀಂನಿಂದ ಗುಲಾಬ್ ಜಾಮೂನ್ ಸಿಹಿತಿಂಡಿಗಳು ಸುಲಭವಾಗಿ ಲಭ್ಯವಿವೆ. ಆದ್ದರಿಂದ ಪ್ರಯಾಣದ ಸಮಯ ನಿಮಗೆ ಸಂಪೂರ್ಣವಾಗಿ ವಿಶೇಷವಾಗಿರುತ್ತದೆ.

firstclasscompartmentsofindianrailways1

ಆಸನಗಳು ಆರಾಮದಾಯಕ

ಇಷ್ಟೇ ಅಲ್ಲ, ಪ್ರಥಮ ದರ್ಜೆಯ ಎಸಿ ಕೋಚ್‌ಗಳ ಸೀಟುಗಳು ಇತರ ಕೋಚ್‌ಗಳ ಸೀಟುಗಳಿಗಿಂತ ಹೆಚ್ಚು ಆರಾಮದಾಯಕ ಮತ್ತು ಮೃದುವಾಗಿರುತ್ತದೆ. ಕುಳಿತುಕೊಳ್ಳಲು ಮತ್ತು ಮಲಗಲು ಸಾಕಷ್ಟು ಸೌಕರ್ಯವನ್ನು ಒದಗಿಸುತ್ತದೆ.

ಸಾಕುಪ್ರಾಣಿಗಳನ್ನು ಸಹ ಕರೆದೊಯ್ಯಿರಿ

ನೀವು ನಿಮ್ಮ ಸ್ವಂತ ಸಾಕು ನಾಯಿ ಅಥವಾ ಬೆಕ್ಕು ಹೊಂದಿದ್ದರೆ ಈ ಪ್ರಾಣಿಗಳನ್ನು ಸಹ ಪ್ರಥಮ ದರ್ಜೆ ವಿಭಾಗದಲ್ಲಿ ಕರೆದುಕೊಂಡು ಹೋಗಬಹುದು. ಆದರೆ ಇದರೊಂದಿಗೆ ನೀವು ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಕಾಳಜಿ ವಹಿಸಬೇಕು. ಆದರೆ ನಿಮ್ಮ ಪ್ರೀತಿಯ ಪ್ರಾಣಿಗಳು ಚಿಕ್ಕದಾಗಿದ್ದರೆ ಅದನ್ನು ಬುಟ್ಟಿಯಲ್ಲಿ ಒಯ್ಯುವುದು ಸ್ವೀಕಾರಾರ್ಹ.

ಆಸನ ವ್ಯವಸ್ಥೆ ಹೇಗಿದೆ?

ರೈಲಿನ ಪ್ರಥಮ ದರ್ಜೆ ಕಂಪಾರ್ಟ್‌ಮೆಂಟ್‌ನಲ್ಲಿನ ಆಸನ ವ್ಯವಸ್ಥೆಯು ಇತರ ವಿಭಾಗಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ಇಬ್ಬರು ಮತ್ತು ನಾಲ್ಕು ಜನರಿಗೆ ಆಸನ ವ್ಯವಸ್ಥೆ ಇದೆ. ರೈಲು ಟಿಕೆಟ್‌ಗಳಲ್ಲಿ ಆಸನ ಸಂಖ್ಯೆಗಳನ್ನು ಮುಂಚಿತವಾಗಿ ಬರೆಯಲಾಗುವುದಿಲ್ಲ. ಮೊದಲಿಗೆ, ಈ ಕೋಚ್‌ಗಳಲ್ಲಿ ವಿಐಪಿ ಜನರಿಗೆ ಆಸನಗಳನ್ನು ನೀಡಲಾಗುತ್ತದೆ. ಬಳಿಕ ಉಳಿದವರಿಗೆ ಸೀಟು ನೀಡಲಾಗುತ್ತದೆ. ಹಾಗಾಗಿ ದೂರದ ಊರಿಗೆ ಪ್ರಯಾಣಿಸುವವರು ರೈಲು ಪ್ರಯಾಣ ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರಯಾಣವನ್ನು ಖುಷಿಯಾಗಿಡಬಹುದು.

More News

Read more about: railways train india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+