Search
  • Follow NativePlanet
Share
» »ಬುಕಿಂಗ್‌ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ: ಸ್ಪಷ್ಟನೆ ನೀಡಿದ ಐಆರ್‌ಸಿಟಿಸಿ

ಬುಕಿಂಗ್‌ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ: ಸ್ಪಷ್ಟನೆ ನೀಡಿದ ಐಆರ್‌ಸಿಟಿಸಿ

"ಸಾಮಾಜಿಕ ಮಾಧ್ಯಮದಲ್ಲಿ ಐಆರ್‌ಸಿಟಿಸಿ ಕುರಿತಾಗಿ ವೈರಲ್ ಆಗುತ್ತಿರುವ ಸುದ್ದಿ ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವ ಸುದ್ದಿ. ಬುಕಿಂಗ್‌ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ, ಟಿಕೆಟ್‌ ಬುಕ್‌ ಮಾಡುವ ಪ್ರಕ್ರಿಯೆಯು ಮೊದಲಿನಂತೆಯೇ ಇರುತ್ತದೆ" ಎಂದು ಐಆರ್‌ಸಿಟಿಸಿ ತಿಳಿಸಿದೆ.

ವೈರಲ್‌ ಸುದ್ದಿಯಲ್ಲಿ ವಿವಿಧ ಉಪನಾಮ(ಸರ್‌ ನೇಮ್)ಗಳ ಮೂಲಕ ಇ-ಟಿಕೆಟ್‌ಗಳನ್ನು ಕಾಯ್ದಿರಿಸಲು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಇಂತಹ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಪ್ಪಿಸುವಂತೆ ಐಆರ್‌ಸಿಟಿಸಿ ಸಲಹೆ ನೀಡಿದೆ. ಐಆರ್‌ಸಿಟಿಸಿ ಮಾತ್ರವಲ್ಲ, ಭಾರತೀಯ ರೈಲ್ವೇ ವಕ್ತಾರರೂ ಈ ವೈರಲ್‌ ಸುದ್ದಿಯ ಕುರಿತು ತಮ್ಮ ಟ್ವಿಟರ್‌ ಪೋಸ್ಟ್‌ನಲ್ಲಿ ಇದು ತಪ್ಪುದಾರಿಗೆಳೆಯುವ ಸುದ್ದಿ ಎಂದು ತಿಳಿಸಿದ್ದಾರೆ.

ವೈರಲ್‌ ಪೋಸ್ಟ್‌ ನಲ್ಲಿ ಏನಿದೆ?

ಈ ಕುರಿತು ಸ್ಪಷ್ಟೀಕರ ನೀಡಿರುವ ಐಆರ್‌ಸಿಟಿಸಿ ತನ್ನ ಸೈಟ್‌ನಲ್ಲಿ ಟಿಕೆಟ್ ಬುಕಿಂಗ್ ಅನ್ನು ರೈಲ್ವೆ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಮಾಡಲಾಗುತ್ತದೆ ಎಂದು ಹೇಳಿದೆ. ಆದರೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ ಗಳಲ್ಲಿ "ಉಪನಾಮವು ಅಂದರೆ ಸರ್‌ ನೇಮ್‌ ವಿಭಿನ್ನವಾಗಿದ್ದರೆ ಅಂತಹವರು ತಮ್ಮ ಟಿಕೆಟ್ ಬುಕಿಂಗ್ ಖಾತೆಯಿಂದ ಐಆರ್‌ಸಿಟಿಸಿ ವೆಬ್‌ಸೈಟ್‌ ಅಥವಾ ಅಪ್ಲಿಕೇಶನ್ ನಲ್ಲಿ ಬೇರೆ ಉಪನಾಮ ಹೊಂದಿರುವ ವ್ಯಕ್ತಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಇತರ ಸರ್‌ ನೇಮ್‌ ಹೊಂದಿರುವ ವ್ಯಕ್ತಿಗಳ ಟಿಕೆಟ್ ಬುಕ್ ಮಾಡುವುದರಿಂದ ಶಿಕ್ಷೆಗೆ ಕಾರಣವಾಗಬಹುದು" ಎಂದು ಸುಳ್ಳು ಸುದ್ದಿ ಹರಡಲಾಗಿದೆ.

railwayonlineticketbookingrulesupdate

ಸ್ಪಷ್ಟೀಕರಣದ ಕುರಿತು ಪೋಸ್ಟ್

ಯಾವಾಗ ಈ ಸುದ್ದಿ ವೈರಲ್ ಆಯಿತೋ ನಂತರ, ಐಆರ್‌ಸಿಟಿಸಿ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸ್ಪಷ್ಟೀಕರಣದ ಕುರಿತು ಪೋಸ್ಟ್ ಮಾಡಿದೆ. ಐಆರ್‌ಸಿಟಿಸಿ ತನ್ನ ಪೋಸ್ಟ್‌ನಲ್ಲಿ, ಯಾವುದೇ ವ್ಯಕ್ತಿಯು ತನ್ನ ಐಡಿಯೊಂದಿಗೆ ತನ್ನ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಇದರಲ್ಲಿ, ನಿಮ್ಮ ವೈಯಕ್ತಿಕ ಐಆರ್‌ಸಿಟಿಸಿ ಬಳಕೆದಾರ ಐಡಿಯನ್ನು ಬಳಸಿಕೊಂಡು ನೀವು ತಿಂಗಳಿಗೆ 12 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ನಿಮ್ಮ ಬಳಕೆದಾರ ಐಡಿಯನ್ನು ನೀವು ಆಧಾರ್‌ನೊಂದಿಗೆ ದೃಢೀಕರಿಸಿದ್ದರೆ, ಪ್ರತಿ ಟಿಕೆಟ್‌ನಲ್ಲಿ ಕನಿಷ್ಠ ಒಬ್ಬ ಪ್ರಯಾಣಿಕರು ಆಧಾರ್ ಅನ್ನು ದೃಢೀಕರಿಸಿದರೆ, ನೀವು ತಿಂಗಳಿಗೆ 24 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಆಧಾರ್-ದೃಢೀಕೃತ ಬಳಕೆದಾರರಿಗೆ ಈ ಮಿತಿಯನ್ನು ಹೆಚ್ಚಿಸಲಾಗಿದೆ ದೊಡ್ಡ ಕುಟುಂಬಗಳು ಅಥವಾ ಗುಂಪುಗಳಲ್ಲಿ ತೆರಳುವವರಿಗೆ ಹೆಚ್ಚು ಅನುಕೂಲಕರವಾದ ಪ್ರಯಾಣ ಯೋಜನೆಯನ್ನು ಐಆರ್‌ಸಿಟಿಸಿ ಸುಗಮಗೊಳಿಸುತ್ತದೆ ಎಂದು ಹೇಳಿದೆ.

ನಿಯಮಗಳೇನು?

ವೈಯಕ್ತಿಕ ಬಳಕೆದಾರ ಐಡಿ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ವೈಯಕ್ತಿವಾಗಿ ಮಾರಾಟ ಮಾಡುವ ಹಾಗಿಲ್ಲ ಮತ್ತು ಹಾಗೆ ಮಾಡುವುದು ಅಪರಾಧ ಎಂದು ಐಆರ್‌ಸಿಟಿಸಿ ಹೇಳಿದೆ. ಹಾಗೆ ಮಾಡುತ್ತಿರುವುದು ಕಂಡುಬಂದರೆ, 1989 ರ ರೈಲ್ವೆ ಕಾಯಿದೆಯ ಸೆಕ್ಷನ್ 143 ರ ಅಡಿಯಲ್ಲಿ ಕಠಿಣ ಕ್ರಮಕ್ಕೆ ಅವಕಾಶವಿದೆ.

railwayonlineticketbookingrulesupdate1

IRCTC ನಲ್ಲಿ ಟಿಕೆಟ್ ಬುಕ್ ಮಾಡಲು ಕ್ರಮಗಳು

• IRCTC ವೆಬ್‌ಸೈಟ್‌ ನಲ್ಲಿ ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.

• "ಬುಕ್ ಯುವರ್ ಟಿಕೆಟ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

• ಬೋರ್ಡಿಂಗ್ ಮತ್ತು ನಿಮ್ಮ ಸ್ಥಳದ ವಿಳಾಸಗಳನ್ನು ಭರ್ತಿ ಮಾಡಿ.

• ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ.

• ಪ್ರಯಾಣದ ವರ್ಗವನ್ನು ಆಯ್ಕೆಮಾಡಿ.

• ಲಭ್ಯವಿರುವ ರೈಲು ಆಯ್ಕೆಗಳನ್ನು ವೀಕ್ಷಿಸಿ.

• "ಬುಕ್ ನೌ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

• ಪ್ರಯಾಣಿಕರ ವಿವರಗಳನ್ನು ಭರ್ತಿ ಮಾಡಿ.

• ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.

ಟಿಕೆಟ್ ಅನ್ನು ರದ್ದುಗೊಳಿಸುವುದು ಹೇಗೆ?

• IRCTC ವೆಬ್‌ಸೈಟ್‌ ನಲ್ಲಿ ನಿಮ್ಮ ಬಳಕೆದಾರ ಹೆಸರು ಮತ್ತು ವಾಸ್‌ವರ್ಡ್ ಅನ್ನು ನಮೂದಿಸಿ.

• "ಮೈ ಅಕೌಂಟ್" ವಿಭಾಗಕ್ಕೆ ಹೋಗಿ ಡ್ರಾಪ್-ಡೌನ್ ಮೆನುವಿನಿಂದ "ಬುಕ್ ಮಾಡಿದ ಟಿಕೆಟ್ ಇತಿಹಾಸ" ಆಯ್ಕೆಮಾಡಿ.

• ನೀವು ರದ್ದುಗೊಳಿಸಲು ಬಯಸುವ ಬುಕಿಂಗ್ ಅನ್ನು ಹುಡುಕಿ ಮತ್ತು " ಕ್ಯಾನ್ಸಲ್‌ ಟಿಕೆಟ್ " ಆಯ್ಕೆಯನ್ನು ಕ್ಲಿಕ್ ಮಾಡಿ.

• ಒಂದು ಪಾಪ್‌ ಅಪ್ ವಿಂಡೋ ಕಾಣಿಸುತ್ತದೆ. ನೀವು ರದ್ದುಗೊಳಿಸಲು ಬಯಸುವ ಪ್ರಯಾಣಿಕರನ್ನು ಆಯ್ಕೆ ಮಾಡಿ ಮತ್ತು ಮುಂದಿನ ಬಾಕ್ಸ್‌ ಅನ್ನು ಪರಿಶೀಲಿಸಿ

• "ನಾನು ರದ್ದತಿ ನಿಯಮಗಳು ಮತ್ತು ಕಾರ್ಯವಿಧಾನವನ್ನು ಓದಿದ್ದೇನೆ ಮತ್ತು ಅರ್ಥಮಾಡಿಕೊಂಡಿದ್ದೇನೆ." ಓದಿಕೊಂಡು ದೃಢೀಕರಿಸಲು ಮತ್ತೊಮ್ಮೆ "ಕ್ಯಾನ್ಸಲ್‌ ಟಿಕೆಟ್ " ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಒನ್-ಟೈಮ್ ವಾಸ್‌ವರ್ಡ್ (OTP) ಅನ್ನು ಸ್ವೀಕರಿಸುತ್ತೀರಿ, ಒದಗಿಸಿದ ಕ್ಷೇತ್ರದಲ್ಲಿ OTP ಅನ್ನು ನಮೂದಿಸಿ ಮತ್ತು "ಸಬ್‌ಮಿಟ್" ಕ್ಲಿಕ್ ಮಾಡಿ.

• ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸಿದ ನಂತರ, ನಿಮ್ಮ ಪರದೆಯ ಮೇಲೆ ನೀವು ದೃಢೀಕರಣ ಸಂದೇಶವನ್ನು ಮತ್ತು ಇಮೇಲ್ ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ.

More News

Read more about: irctc travel railways
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+