ನಾಶಿಕ್‌ನಲ್ಲಿನ ಪ್ರಮುಖ ಆಕರ್ಷಣೆಯೆಂದರೆ ರಾಮಕುಂಡ ಕಲ್ಯಾಣಿ. ಸುಮಾರು 300 ವರ್ಷಗಳ ಹಿಂದೆ ಈ ಕಲ್ಯಾಣಿಯನ್ನು ನಿರ್ಮಿಸಲಾಗಿತ್ತು. ಈ ಕಲ್ಯಾಣಿ ಸುಮಾರು 1696 ನೇ ಇಸ್ವಿಯದ್ದು. ಇದನ್ನು ಚಿತಾರಾವ್ ಖಾತರ್ಕರ್ ನಿರ್ಮಿಸಿದ್ದರು. ವಿಶಾಲವಾದ ಈ ಕಲ್ಯಾಣಿಯು 27 ಮೀಟರ್ ಬೈ 12 ಮೀಟರು ಇದೆ.
ಈ ಕಲ್ಯಾಣಿಯಲ್ಲಿ ರಾಮ ಮತ್ತು ಸೀತೆಯರು ತಮ್ಮ ವನವಾಸದ ಸಮಯದಲ್ಲಿ ಸ್ನಾನ ಮಾಡಿದ್ದರು ಎಂದು ಹೇಳಲಾಗಿದೆ. ಹಿಂದುಗಳು ಇಲ್ಲಿ ಮೃತ ವ್ಯಕ್ತಿಯ ಅಂತ್ಯಸಂಸ್ಕಾರದ ಸುಟ್ಟ ಬೂದಿಯ ಅವಶೇಷಗಳನ್ನು ಇಲ್ಲಿ ತಂದು ಬಿಡುತ್ತಾರೆ. ಹೀಗೆ ಮಾಡುವುದರಿಂದ ಮೃತನ ಆತ್ಮವು ಮೋಕ್ಷ ತಲುಪುತ್ತದೆ ಎಂಬ ನಂಬಿಕೆಯಿದೆ. ಪ್ರಸಿದ್ಧ ರಾಜಕೀಯ ವ್ಯಕ್ತಿಗಳಾದ ಇಂದಿರಾಗಾಂಧಿ ಮತ್ತು ಪಂಡಿತ್ ಜವಾಹರಲಾಲ ನೆಹರೂರವರ ಪವಿತ್ರ ಬೂದಿಯನ್ನು ಇಲ್ಲಿ ವಿಸರ್ಜಿಸಲಾಗಿದೆ. ಪುಣ್ಯಸ್ನಾನ ಮಾಡಲು ಇಚ್ಛಿಸುವ ಹಲವು ಭಕ್ತರನ್ನು ಈ ರಾಮಕುಂಡವು ಆಕರ್ಷಿಸುತ್ತದೆ. ನಾಶಿಕ್ ಬಸ್‌ಸ್ಟ್ಯಾಂಡ್‌ನಿಂದ ಇದು 10 ಕಿ.ಮೀ ದೂರದಲ್ಲಿದೆ.


Click it and Unblock the Notifications