ಕೃಷ್ಣಾ ನದಿ ತಟದಲ್ಲಿರುವ ಊರು ನಂದಿಕೊಂಡ. ಇದು ನಾಗಾರ್ಜುನಸಾಗರಕ್ಕೆ ಬಹಳ ಸಮೀಪದಲ್ಲಿದೆ.
ವಿಜಯಪುರಿ ಪಟ್ಟಣದಿಂದ ನಂದಿಕೊಂಡ ಸುಲಭವಾಗಿ ತಲುಪಬಹುದಾದ ದೂರದಲ್ಲಿದೆ. ಇಕ್ಶ್ವಾಕು ವಂಶದ ಒಂದು ಪಟ್ಟಣ ಇದಾಗಿತ್ತು.
ಇದು ನಲ್ಗೊಂಡದ ಒಂದು ಪ್ರಸಿದ್ಧ ಬೌದ್ಧ ತಾಣ. ಇಲ್ಲಿ ಉತ್ಖನನ ದ ವೇಳೆ ಹಲವಾರು ಬೌದ್ಧ ದೇವಾಲಯ ಹಾಗೂ ಇತರೆ ಬೌದ್ಧ ಧರ್ಮಕ್ಕೆ ಸಂಬಧಿಸಿದ ಕಟ್ಟಡಗಳು ಸಿಕ್ಕ ಮೇಲೆ ಈ ಸ್ಥಳದ ಮಹತ್ವ ಹೆಚ್ಚಾಗಿದೆ.
ಈ ಸ್ಥಳವು ಇತಿಹಾಸಾಸಕ್ತರಿಗೆ ಮತ್ತು ತಮ್ಮೊಳಗೆ ಅಡಗಿರುವ ಪುತಾತತ್ವ ಆಸಕ್ತಿಯನ್ನು ಹೊರತರಬಯಸುವವರಿಗೆ ಬಹಳ ಉತ್ತಮವಾದ ಸ್ಥಳವಾಗಿದೆ. ಬೌದ್ಧ ಮಂದಿರಗಳ ಹೊರತಾಗಿ ಇಕ್ಷ್ವಾಕು ವಂಶದವರು ಕಟ್ಟಿಸಿದ್ದ ಕೋಟೆಯ ಕುರುಹುಗಳನ್ನೂ ನಾವಿಲ್ಲಿ ಕಾಣಬಹುದು. ಈ ಕೋಟೆಯು ಈ ವಂಶ ಇಲ್ಲಿನ ಪ್ರದೇಶಗಳ ಮೇಲೆ ಹೊಂದಿದ್ದ ಪ್ರಭುತ್ವ ಮತ್ತು ಪ್ರಭಾವಗಳನ್ನು ಸೂಚಿಸುತ್ತದೆ. ಇಲ್ಲಿನ ಕೆಲವು ಪಳೆಯುಳಿಕೆಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾಗಿ ಈಗ ಕೇಂದ್ರೀಯ ಪುರಾತತ್ವ ಇಲಾಖೆಯ ವಸ್ತುಸಂಗ್ರಹಾಲಯದಲ್ಲಿವೆ.


Click it and Unblock the Notifications