ಜಗತ್ತಿನಲ್ಲೇ ಅತ್ಯಂತ ಹಳೆಯ ಗಾಲ್ಫ್ ಕೋರ್ಸ್ ಇರುವುದು ನಾಲ್ದೇರಾದಲ್ಲಿ. ಭಾರತದ ವೈಸ್‌ರಾಯ್ ಲಾರ್ಡ್ ಕರ್ಜನ್‌ರಿಂದ ಈ ಗಾಲ್ಫ್ ಕೋರ್ಸ್‌ನ್ನು 1920 ರಲ್ಲಿ ಸ್ಥಾಪಿಸಲಾಯಿತು. ನಾಲ್ದೇರಾದ ಸೌಂದರ್ಯಕ್ಕೆ ಇವರು ಮರುಳಾಗಿದ್ದರು. ಗಾಲ್ಪ್ ಕೋರ್ಸ್ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಇವರು ಆಗಾಗ ಬಂದು ಇಲ್ಲಿ ವಾಸವಿರುತ್ತಿದ್ದರು.
ಸದ್ಯ ಇದು ಹಿಮಾಚಲ ಟೂರಿಸಂ ಡಿಪಾರ್ಟ್‌ಮೆಂಟ್‌ನಿಂದ ನಿರ್ವಹಿಸಲ್ಪಡುತ್ತಿದೆ. 18 ರಂಧ್ರಗಳುಳ್ಳ ಈ ಗಾಲ್ಫ್ ಕ್ಲಬ್ ಭಾರತದಲ್ಲಿರುವ ಇತರೆ ಎಲ್ಲಾ ಗಾಲ್ಫ್ ಕೋರ್ಸ್‌ಗಳಿಗಿಂತಲೂ ಅತ್ಯುತ್ತಮ ಮತ್ತು ಜನಪ್ರಿಯ ಗಾಲ್ಫ್ ಕೋರ್ಸ್ ಎಂದು ಪರಿಗಣಿತವಾಗಿದೆ. ಇತರ ಗಾಲ್ಪ್ ಕ್ಲಬ್‌ಗಳಾದ ಆರ್ಟ್‌ರಾಕ್ ಗಾಲ್ಫ್ ಕ್ಲಬ್ ಶಿಮ್ಲಾ, ಬಿಎಸ್‌ಎಫ್ ಗಾಲ್ಫ್ ಕ್ಲಬ್ ದೆಹಲಿ, ಗಾಲ್ಫ್ ಕ್ಲಬ್ ಚಂಡೀಗಢ ಮತ್ತು ಏರ‍್ ಫೋರ್ಸ್ ಗಾಲ್ಫ್ ಕ್ಲಬ್ ದೆಹಲಿ ಇವುಗಳ ಮಾನ್ಯತೆಯನ್ನು ಇದು ಹೊಂದಿದೆ. ವಾತಾವರಣವನ್ನು ಆಧರಿಸಿ ಈ ಗಾಲ್ಫ್ ಕೋರ್ಸ್ ತೆರೆದಿರುತ್ತದೆ. ವಿಶೇಷವಾಗಿ ಏಪ್ರಿಲ್‌ನಿಂದ ನವೆಂಬರಿನ ಅವಧಿಯಲ್ಲಿ ಇದು ತೆರೆದಿರುತ್ತದೆ.


Click it and Unblock the Notifications